ಸಿಬಿಎಸ್‌ಸಿ ಫಲಿತಾಂಶ : 10ನೇ ತರಗತಿಯ 3 ವಿದ್ಯಾರ್ಥಿಗಳಿಗೆ 495 ಅಂಕ

ಬೆಂಗಳೂರು : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ(ಸಿಬಿಎಸ್‌ಇ) 10 ಮತ್ತು 12ನೇ ತರಗತಿಗಳ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌ನ 10ನೇ ತರಗತಿಯ 3 ವಿದ್ಯಾರ್ಥಿಗಳು 500ಕ್ಕೆ 495 ಹಾಗೂ 12ನೇ ತರಗತಿಯಲ್ಲಿ 500ಕ್ಕೆ 496 ಅಂಕಗಳೊಂದಿಗೆ ಓರ್ವ ವಿದ್ಯಾರ್ಥಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.
ಮೇಲ್ಕಂಡ ಶಾಲೆಯ 10ನೇ ತರಗತಿಯ ಒಟ್ಟು 20 ವಿದ್ಯಾರ್ಥಿಗಳು 490 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ ಮತ್ತು 12ನೆ ತರಗತಿಯಲ್ಲಿ 12 ಮಂದಿ ವಿದ್ಯಾರ್ಥಿಗಳು 490 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಈ ಸಾಧನೆ ಗೈದ ವಿದ್ಯಾರ್ಥಿಗಳನ್ನು ಸ್ಕೂಲ್‌ನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಶ್ಲಾಘಿಸಿದ್ದಾರೆ ಎಂದು ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಸುಷ್ಮಾ ಬೊಪ್ಪಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





