ಸಂವಿಧಾನ ವಿರೋಧಿ ಜ್ಞಾನೇಶ್ ಕುಮಾರ್ ಪರ ನಿಂತ ಕೇಂದ್ರ ಸರಕಾರ : ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಸಂವಿಧಾನ ವಿರುದ್ಧ ನಿಲ್ಲುವ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪರ ಕೇಂದ್ರ ಸರಕಾರ ನಿಂತಿದ್ದು, ಆಯುಕ್ತರ ಅಮಾನತಿಗೆ ಆಗ್ರಹಿಸಿ ದಿಲ್ಲಿಯಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ನೀಡದೇ ಕೇಂದ್ರ ಸರಕಾರ ದಿಲ್ಲಿಯನ್ನು ಸ್ತಬ್ಧಗೊಳಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಲ್ಲಿಯಲ್ಲಿ ಸುಮಾರು 70 ಸಾವಿರ ರೂ. ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಆಯುಧಗಳನ್ನು ತರಿಸಲಾಗಿದೆ. Gen Z ಮೇಲೆ ಪ್ರಯೋಗ ಮಾಡಲು ಈ ಕ್ರಮಗಳನ್ನು ಕೇಂದ್ರ ಸರಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದ್ದರೂ ಕೇಂದ್ರ ಸರಕಾರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಕ್ಷಣೆಗೆ ನಿಂತಿದೆ. ಭಯದಿಂದಾಗಿ ದಿಲ್ಲಿಯಲ್ಲಿ ಮೆಟ್ರೋವನ್ನು ಸ್ಥಗಿತಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ನಿಜವಾಗಿಯೂ ಧೈರ್ಯ ಇದೆಯಾ? ಎಂದು ಅವರು ಪ್ರಶ್ನಿಸಿದ್ದಾರೆ.
Next Story




