ದ.ರಾ.ಬೇಂದ್ರೆ ಉದ್ಯಾನವನದ ನಾಮಫಲಕದಲ್ಲಿ ಬೇಂದ್ರೆಯವರ ಚಿತ್ರವೇ ಇಲ್ಲ: ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ನಾಗರಿಕರ ಅಸಮಾಧಾನ

ಬೆಂಗಳೂರು: ಇಲ್ಲಿನ ಪದ್ಮನಾಭನಗರ ಕ್ಷೇತ್ರದ ವ್ಯಾಪ್ತಿಯ ಇಸ್ರೋ ಬಡಾವಣೆಯಲ್ಲಿರುವ ದ.ರಾ.ಬೇಂದ್ರೆ ಉದ್ಯಾನವನದ ನಾಮಫಲಕದಲ್ಲಿ ವರಕವಿ ಬೇಂದ್ರೆ ಅವರ ಚಿತ್ರವೇ ಇಲ್ಲವಾಗಿದ್ದು ಬದಲಾಗಿ, ಕ್ಷೇತ್ರದ ಶಾಸಕ, ವಿಪಕ್ಷ ನಾಯಕ ಆರ್.ಅಶೋಕ್ ಅವರ ಚಿತ್ರ ರಾರಾಜಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ದ.ರಾ.ಬೇಂದ್ರೆ ಉದ್ಯಾನವನದ ಫಲಕದಲ್ಲಿ ಒಂದೆಡೆ ಬಿಬಿಎಂಪಿ ಲೋಗೋ ಇದ್ದರೆ, ಮತ್ತೊಂದೆಡೆ ಆರ್.ಅಶೋಕ್ ಅವರ ಚಿತ್ರವಿದೆ. ಹೀಗಾಗಿ, ಇಲ್ಲಿಗೆ ಬರುವವರು ಅಸಮಾಧಾನ ವ್ಯಕ್ತಪಡಿಸಿದ್ದು, ಬೇಂದ್ರೆ ಅವರ ಹೆಸರಿನ ಉದ್ಯಾನವನದ ನಾಮಫಲಕದಲ್ಲಿ ಅವರ ಚಿತ್ರವೇ ಇಲ್ಲದಿರುವುದು ಮತ್ತು ಆರ್.ಅಶೋಕ್ ತಮ್ಮ ಫೋಟೋವನ್ನು ಮಾತ್ರ ಹಾಕಿಕೊಂಡಿರುವುದು ನಿಜಕ್ಕೂ ಕನ್ನಡದ ಪ್ರಸಿದ್ಧ ಕವಿ ಬೇಂದ್ರೆಯವರಿಗೆ ಮಾಡಿದ ಅಪಮಾನ ಎಂದು ತಿಳಿಸಿದ್ದಾರೆ.
ಇನ್ನು, ಈ ಉದ್ಯಾನವನದ ನಾಮಫಲಕದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
Next Story





