ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ

ಚುನಾವಣಾ ಆಯೋಗ | Photo Credit : PTI
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನ ದ್ವೈವಾರ್ಷಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗವು ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ.
ಏಳು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದ್ದು, ಜೂನ್ 18ರಂದು ಮತದಾನ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ನಸೀರ್ ಅಹ್ಮದ್, ಗೋವಿಂದ ರಾಜು, ಎನ್. ನಾಗರಾಜು (ಎಂಟಿಬಿ), ಪ್ರತಾಪ ಸಿಂಹ ನಾಯಕ್ ಕೆ., ತಿಪ್ಪಣ್ಣಪ್ಪ ಹಾಗೂ ಸುನೀಲ್ ವಲ್ಯಾಪುರ ಅವರ ಸದಸ್ಯತ್ವ ಅವಧಿಯು ಜೂನ್ 30ರಂದು ಕೊನೆಗೊಳ್ಳಲಿದೆ.
ವೇಳಾಪಟ್ಟಿ:
ಚುನಾವಣೆ ಅಧಿಸೂಚನೆ: ಜೂನ್ 1
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಜೂನ್ 8
ನಾಮಪತ್ರ ಪರಿಶೀಲನೆ: ಜೂನ್ 9
ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಜೂನ್ 11
ಮತದಾನ: ಜೂನ್ 18
ಮತ ಎಣಿಕೆ: ಜೂನ್ 18
Next Story




