ರಾಜ್ಯಪಾಲರಿಗೆ ದೂರು ನೀಡುವುದು ಅನಿವಾರ್ಯವಾಗಿತ್ತು: ಡಿ.ಎನ್.ಜೀವರಾಜ್

ಡಿ.ಎನ್.ಜೀವರಾಜ್
ಬೆಂಗಳೂರು, ಮೇ 6: ವಿಧಾನಸಭೆಯ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸುವ ಕುರಿತು ಮನವಿ ಸಲ್ಲಿಸಲಾಗಿತ್ತು. ಆದರೆ, ಸ್ಪೀಕರ್ ಯು.ಟಿ.ಖಾದರ್ ನಮಗೆ ಅವಕಾಶ ನೀಡಿರಲಿಲ್ಲ. ಆದುದರಿಂದ, ಅನಿವಾರ್ಯವಾಗಿ ರಾಜ್ಯಪಾಲರ ಬಳಿ ಹೋಗಿ ದೂರು ನೀಡಬೇಕಾಯಿತು ಎಂದು ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮಾಣವಚನಕ್ಕೆ ಅವಕಾಶ ನೀಡುತ್ತೇವೆ. ಎರಡು ದಿನ ಬಿಟ್ಟು ಬನ್ನಿ ಎಂದು ಸ್ಪೀಕರ್ ಹೇಳಿದ್ದರೆ, ನಾವು ರಾಜ್ಯಪಾಲರ ಬಳಿ ಹೋಗುತ್ತಿರಲಿಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ, ಸೋತ ಕೂಡಲೆ ತಮ್ಮದೆ ಸರಕಾರ ಇದೆ ಎಂದು ನಮ್ಮ ವಿರುದ್ಧ ದೂರು ನೀಡಿ ಎಫ್ಐಆರ್ ದಾಖಲು ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಮರು ಮತ ಏಣಿಕೆಗೂ ಕೇಳುವ ಹಾಗಿಲ್ಲವೆ? ಇದೆಲ್ಲ ಹೋರಾಟ ಮಾಡಿ ಗೆದ್ದವರ ಆತ್ಮಸ್ಥೈರ್ಯ ಕುಗ್ಗಿಸುವಂತಿದೆ ಎಂದು ತಿಳಿಸಿದರು.
Next Story




