ಬೆಂಗಳೂರು ಸಮುದಾಯದ ಅಧ್ಯಕ್ಷರಾಗಿ ಡಾ.ಬಂಜಗೆರೆ ಜಯಪ್ರಕಾಶ್ ಆಯ್ಕೆ

ಬೆಂಗಳೂರು : ಕರ್ನಾಟಕದ ಸಾಂಸ್ಕೃತಿಕ ಚಳವಳಿಯಲ್ಲಿ ಬಹುಮುಖ್ಯ ಹೆಸರಾಗಿರುವ ಬೆಂಗಳೂರು ಸಮುದಾಯದ ಅಧ್ಯಕ್ಷರಾಗಿ ಹಿರಿಯ ಬಂಡಾಯ ಸಾಹಿತಿ, ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ.
ವಿಮರ್ಶಕ, ಅಂಕಣಕಾರ, ಡಾ.ಮಂಜುನಾಥ್ ಬಿ.ಆರ್. ಅವರು ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಎನ್.ಎಸ್.ಸನತ್‍ಕುಮಾರ್, ಪದ್ಮಾ ಶಿವಮೊಗ್ಗ, ಕಾರ್ಯದರ್ಶಿಯಾಗಿ ಸಂಗಮೇಶ ಶಿವಣಗಿ, ಖಜಾಂಚಿಯಾಗಿ ಫೈರೋಜ್ ಕೆ., ಜಂಟಿ ಕಾರ್ಯದರ್ಶಿಗಳಾಗಿ ನಾಗಲಕ್ಷ್ಮೀ, ಎಂ.ಅನಂತು ಶಾಂದ್ರೇಯ ಅವರು ಆಯ್ಕೆ ಆಗಿದ್ದಾರೆ.
ಸದಸ್ಯರನ್ನಾಗಿ ಸಿ.ಕೆ.ಗುಂಡಣ್ಣ, ಜೆ.ಸಿ.ಶಶಿಧರ್, ಕಾವ್ಯ ಅಚ್ಯುತ್, ಪ್ರಣವ್ ವಿ., ಕಿಶನ್, ಎಂ.ವಿ.ಸುರೇಶ್, ದಿಲೀಪ್, ರವೀಂದ್ರನಾಥ ಸಿರಿವರ, ಡಾ.ರವಿಕುಮಾರ್ ಬಾಗಿ ಅವರನ್ನು ಗುರುವಾರ ನಗರದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.
Next Story





