ಡಾ.ಬೋಬಿ ಚೆಮ್ಮನೂರ್‌ಗೆ ಸ್ಪೀಕರ್ ಯು.ಟಿ.ಖಾದರ್ ಸನ್ಮಾನ

ಬೆಂಗಳೂರು : ವಿಧಾನಸೌಧದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರು ಡಾ.ಬೋಬಿ ಚೆಮ್ಮನೂರ್ ಅವರನ್ನು ಸನ್ಮಾನಿಸಿದರು.
“ಬೋಚೆ” ಎಂದು ಕರೆಯಲ್ಪಡುವ ಡಾ.ಬೋಬಿ ಚೆಮ್ಮನೂರ್, ವಿಶ್ವಶಾಂತಿಯ ಸಂದೇಶವನ್ನು ಹರಡುವ ಉದ್ದೇಶದಿಂದ ಬೋಚೆ 812 ಕಿಲೋಮೀಟರ್ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಯುನಿಕ್ ವರ್ಲ್ಡ್ ರೆಕಾರ್ಡ್ ಹಾಗೂ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧಿಸಿದ್ದಾರೆ.
ಸಮಾಜ ಸೇವೆಗೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಮದರ್ ತೆರೆಸಾ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳು ಬೋಚೆ ಅವರಿಗೆ ಲಭಿಸಿವೆ.
ವಿಧಾನಸಭೆಯಲ್ಲೂ ಸ್ಪೀಕರ್ ಖಾದರ್ ಅವರು ಬೋಚೆ ಅವರ ಸಾಧನೆಯನ್ನು ವಿವರಿಸಿ ಅಭಿನಂದನೆ ಸಲ್ಲಿಸಿದ್ದಾರೆ
ಈ ಸಂದರ್ಭದಲ್ಲಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಶಾಸಕ ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಉಪಸ್ಥಿತರಿದ್ದರು.
Next Story





