ಪೋಲ್ ವಾಲ್ಟ್ ಕ್ರೀಡಾಪಟುವಿಗೆ 3 ಪೋಲ್ ಹಾಗೂ 5 ಲಕ್ಷ ರೂ.ಸಹಾಯ ಧನ : ಡಾ.ಪರಮೇಶ್ವರ್

ಬೆಂಗಳೂರು : ಪೋಲ್ ವಾಲ್ಟ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಜಪಾನ್‍ನಲ್ಲಿ ನಡೆಯಲಿರುವ ಏಷಿಯನ್ ಗೇಮ್ಸ್ ಸ್ಪರ್ಧೆಗೆ ತಯಾರಿ ನಡೆಸಿರುವ ಶಿವಮೊಗ್ಗ ಮೂಲದ ಸಿಂಧುಶ್ರೀ ಗಣೇಶ್‍ಗೆ ಒಟ್ಟಾರೆ 7.5ಲಕ್ಷ ರೂ.ಬೆಲೆ ಬಾಳುವ ಅಂತರರಾಷ್ಟ್ರೀಯ ಗುಣಮಟ್ಟದ 3 ಪೋಲ್‍ಗಳನ್ನು ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೆಶ್ವರ್ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಅವರು, ಸಿಂಧುಶ್ರೀ ಬಡತನದಿಂದ ಬಂದ ಹೆಣ್ಣು ಮಗಳು. ಇಂದು ಕ್ರೀಡಾ ಇಲಾಖೆಯ ಮೂಲಕ ಅಂತರರಾಷ್ಟ್ರೀಯ ಕ್ರೀಡಾಪಟುವನ್ನಾಗಿ ತಯಾರಿ ಮಾಡಲಾಗಿದೆ. ಪೋಲ್ ವಾಲ್ಟ್ ಕ್ರೀಡೆಯಲ್ಲಿ 4.02 ಮೀಟರ್ ಎತ್ತರ ಕ್ಲೀಯರ್ ಮಾಡುವ ಮೂಲಕ, ಜಪಾನ್‍ನಲ್ಲಿ ನಡೆಯಲಿರುವ ಏಷಿಯನ್ ಗೇಮ್ಸ್ ಗೆ ಅರ್ಹತೆ ಪಡೆದಿದ್ದಾರೆ. ಇಲಾಖೆ ವತಿಯಿಂದ ಅಗತ್ಯವಿರುವ ಅಂತರರಾಷ್ಟ್ರೀಯ ಗುಣಮಟ್ಟದ 3 ಕೋಲುಗಳನ್ನು ವಿದೇಶದಿಂದ ತರಿಸಿ ಕೊಡಲಾಗಿದೆ ಎಂದು.
ಸಿಂಧುಶ್ರೀ ಅವರಿಗೆ ಅಂತರರಾಷ್ಟ್ರೀಯ ಗುಣಮಟ್ಟದ 3 ಪೋಲ್‍ಗಳ ಜತೆಗೆ 5 ಲಕ್ಷ ರೂಪಾಯಿ ಸಹಾಯ ಧನ ಒದಗಿಸಲಾಗುತ್ತಿದೆ ಎಂದು ಡಾ.ಪರಮೇಶ್ವರ್ ತಿಳಿಸಿದರು. ಈ ವೇಳೆ ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ಎಮ್.ಎನ್.ಅನುಚೇತ್ ಹಾಗೂ ಸರಕಾರಿ ವೈಮಾನಿಕ ತರಬೇತಿ ಶಾಲೆಯ ಪ್ರಾಂಶುಪಾಲ ಬಸವರಾಜ್ ಉಪಸ್ಥಿತರಿದ್ದರು.




