ಡಾ.ವಿಜಯಾ ಸೇರಿ ಮೂವರಿಗೆ ʼಎಚ್.ಎಸ್.ಪಾರ್ವತಿ ದತ್ತಿ ಪ್ರಶಸ್ತಿʼ

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ ಎಚ್.ಎಸ್.ಪಾರ್ವತಿ ದತ್ತಿ ಪ್ರಶಸ್ತಿಯ 2024ನೇ ಸಾಲಿಗೆ ಡಾ.ಬಿ.ಎನ್.ಸುಮಿತ್ರಾ ಬಾಯಿ, 2025ನೇ ಸಾಲಿಗೆ ಡಾ. ವಿಜಯಾ, ಹಾಗೂ 2026ನೇ ಸಾಲಿಗೆ ಡಾ.ಅನಸೂಯಾ ಕಾಂಬ್ಳೆ ಅವರು ಆಯ್ಕೆಯಾಗಿದ್ದಾರೆ.
ದತ್ತಿಯನ್ನು ಕನ್ನಡದ ಪ್ರಸಿದ್ಧ ಲೇಖಕಿ, ಅನುವಾದಕಿ ಎಚ್.ಎಸ್. ಪಾರ್ವತಿ ಅವರು ಸ್ಥಾಪಿಸಿದ್ದಾರೆ. ಪಾರ್ವತಿ ಅವರು ಕಲೇಸಂನ ಸ್ಥಾಪಕ ಕಾರ್ಯದರ್ಶಿ, ನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದತ್ತಿ ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿಯ ತೀರ್ಪುಗಾರರಾಗಿ ಡಾ.ಆರ್.ಸುನಂದಮ್ಮ, ಡಾ. ಬೈರಮಂಗಲ ರಾಮೇಗೌಡ, ಪ್ರೊ.ಎಂ.ಎಸ್.ಆಶಾದೇವಿ, ಡಾ. ಎಂ.ಎಸ್.ವಿದ್ಯಾ ಹಾಗೂ ಸುಮಾ ಸತೀಶ್ ಇದ್ದರು. ನ.27ರಂದು ನಗರದ ಬಿಎಂಶ್ರೀ ಪ್ರತಿಷ್ಠಾ ನದಲ್ಲಿ ಪ್ರಶಸ್ತಿ ಪ್ರದಾನ ನಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Next Story




