ದ್ರಾವಿಡ ಭಾಷಾ ಅನುವಾದಕರ ಸಂಘದಿಂದ ಭಾಷಾಂತರ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಬೆಂಗಳೂರು: ದ್ರಾವಿಡ ಭಾಷಾ ಅನುವಾದಕರ ಸಂಘ (DBTA) ಭಾಷಾಂತರ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿದೆ. ತಮಿಳು, ಮಲಯಾಳಂ, ತೆಲುಗು ಅಥವಾ ತುಳು ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ ಮಾಡಿರುವ ಕಾದಂಬರಿಗಳಿಗೆ ಈ ಪ್ರಶಸ್ತಿ ನೀಡಲಾಗುವುದು.
ಕೃತಿಗಳು 2023 ಅಥವಾ 2024ರಲ್ಲಿ ಪ್ರಕಟವಾಗಿರಬೇಕು. ಅರ್ಜಿದಾರರು ಮೂಲ ಕೃತಿಯ ಒಂದು ಪ್ರತಿ ಹಾಗೂ ಭಾಷಾಂತರಿತ ಕನ್ನಡ ಆವೃತ್ತಿಯ ಮೂರು ಪ್ರತಿಗಳನ್ನು ಜೂನ್ 20ರ ಒಳಗಾಗಿ ಅಧ್ಯಕ್ಷರು, ಡಿಬಿಟಿಎ,ಶ್ರೀ ಭೈರವೇಶ್ವರ ನಿಲಯ,ಇಮ್ಮಡಿ ಹಳ್ಳಿ, ಮುಖ್ಯ ರಸ್ತೆ, ಹಗದೂರು, ವೈಟ್ಫೀಲ್ಡ್, ಬೆಂಗಳೂರು - 560066 ಎಂಬ ವಿಳಾಸಕ್ಕೆ ಕಳುಹಿಸಬಹುದು.
ಈ ಪ್ರಶಸ್ತಿಯು ₹11,111 ನಗದು ಬಹುಮಾನವನ್ನು ಒಳಗೊಂಡಿದ್ದು, ಸೆಪ್ಟೆಂಬರ್ನಲ್ಲಿ ನಡೆಯಲಿರುವ ಸಂಘದ ನಾಲ್ಕನೇ ವಾರ್ಷಿಕ ಮಹಾಸಭೆಯ ವೇಳೆ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅಧ್ಯಕ್ಷರು: 9901041889
ಕಾರ್ಯದರ್ಶಿ: 9731561354.
Next Story