ಬೆಂಗಳೂರು | 38.11 ಕೋಟಿ ರೂ. ಮೌಲ್ಯದ ಮಾದಕ ಪದಾರ್ಥ ನಾಶಪಡಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ
ಬೆಂಗಳೂರು : ಆರು ತಿಂಗಳ ಅವಧಿಯಲ್ಲಿ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ವಶಪಡಿಸಿಕೊಂಡ 38.11 ಕೋಟಿ ರೂ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ಬೆಂಗಳೂರು ಪೊಲೀಸರು ನಾಶಪಡಿಸಿದ್ದಾರೆ.
699.29 ಕೆಜಿ ಗಾಂಜಾ, 1.970 ಕೆಜಿ ಹ್ಯಾಶಿಶ್ ಆಯಿಲ್, 702 ಗ್ರಾಂ ಚರಸ್, 163 ಗ್ರಾಂ ಕೊಕೇನ್, 19.557 ಕೆಜಿ ಎಕ್ಸ್ಟಸಿ ಪುಡಿ/ಹರಳುಗಳು, 287 ಎಕ್ಸ್ಟಸಿ ಮಾತ್ರೆಗಳು, 38 ಗ್ರಾಂ ಎಕ್ಸ್ಟಸಿ ಯಾಬಾ, 12.450 ಕೆಜಿ ಎಂಎಸ್ಎಂ, 842 ಟಪೆಂಟಾಡೋಲ್ ಮಾತ್ರೆಗಳು, 5.100 ಕೆಜಿ ಪವರ್ ಮುನಕ್ಕಾವತಿ, 60 ಟೈಡಾಲ್ ಮಾತ್ರೆಗಳು, 260 ಬಾಟಲ್ ಎಸ್ಕಫ್ ಸಿರಪ್, 4.900 ಕೆಜಿ ಸೋಡಿಯಂ ಹೈಡ್ರಾ ಸೇರಿದಂತೆ 38.11 ಕೋಟಿ ರೂ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ನ್ಯಾಯಾಲಯ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಮಾದಕ ವಿಲೇವಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಡ್ರಗ್ಸ್ ನಾಶಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.
Next Story





