ಜಿಬಿಎ ಅನ್ನು 369 ವಾರ್ಡ್‍ಗಳಾಗಿ ವಿಭಜಿಸಿ ಅಂತಿಮ ಅಧಿಸೂಚನೆ ಪ್ರಕಟ

ಬೆಂಗಳೂರು : ರಾಜ್ಯ ಸರಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು(ಜಿಬಿಎ) ಐದು ಪಾಲಿಕೆಗಳಾಗಿ ವಿಂಗಡಿಸಿದ್ದು, ಈ ಪಾಲಿಕೆಗಳನ್ನು ಒಟ್ಟು 369 ವಾರ್ಡ್‍ಗಳಾಗಿ ವಿಭಜನೆ ಮಾಡಿ, ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ.
ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 63, ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 50, ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 112, ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 72, ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 72 ವಾರ್ಡ್‍ಗಳು ಬರಲಿವೆ.
ಈ ಹಿಂದಿನ ಕರಡು ಅಧಿಸೂಚನೆಯಲ್ಲಿ ಒಟ್ಟು 368 ವಾರ್ಡ್‍ಗಳಿದ್ದವು. ಸಲಹೆ ಮತ್ತು ಅಕ್ಷೇಪಣೆಗಳನ್ನು ಪರಿಗಣಿಸಿ, ಈಗ 369 ವಾರ್ಡ್‍ಗಳಾಗಿ ವಿಂಗಡಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
Next Story





