ಬೆಂಗಳೂರು | ಲೈಂಗಿಕ ಕಿರುಕುಳ ಆರೋಪ : ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ಧ ಎಫ್ಐಆರ್ ದಾಖಲು

ಚರಿತ್ ಬಾಳಪ್ಪ
ಬೆಂಗಳೂರು : ಬೆದರಿಸಿ ಹಣ ಸುಲಿಗೆ ಮಾಡಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ಧ ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಹಿಳೆಯೊಬ್ಬರು ದೂರು ನೀಡಿದ್ದು, ಚಿತ್ರೀಕರಣ ನೋಡಲು ತೆರಳಿದ್ದಾಗ ಪರಿಚಯವಾದ ಚರಿತ್ ಬಾಳಪ್ಪ, ನನ್ನೊಂದಿಗೆ ಸಲುಗೆ ಬೆಳೆಸಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ಆನಂತರ ಮತ್ತೊಬ್ಬಕೆ ಜೊತೆ ಮದುವೆ ಮಾಡಿಕೊಂಡು, ಬಳಿಕವೂ ನನ್ನೊಂದಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದರು. ಒಪ್ಪದಿದ್ದಾಗ ನಮ್ಮಿಬ್ಬರ ಖಾಸಗಿ ಫೊಟೋಗಳನ್ನು ತೋರಿಸಿ ಬೆದರಿಕೆ ಮಾಡಿದ್ದಾರೆ. ಹಣ ಸುಲಿಗೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆಯ ದೂರಿನನ್ವಯ ಚರಿತ್ ಬಾಳಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಮಂಗಳೂರು ಮೂಲದ ಕಿರುತೆರೆ ನಟ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಯೂರಿದ್ದು, ಕನ್ನಡದ ಮುದ್ದುಲಕ್ಷ್ಮೀ ಸೇರಿ ತೆಲುಗಿನ ಅನೇಕ ಧಾರವಾಹಿಗಳಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ.





