ಬೆಂಗಳೂರು| ಶೋರೂಂನಲ್ಲಿ ಬೆಂಕಿ ಅವಘಢ: 30ಕ್ಕೂ ಹೆಚ್ಚು ಬೈಕ್ಗಳು ಬೆಂಕಿಗಾಹುತಿ

Photo credit: ANI
ಬೆಂಗಳೂರು: ಇಲ್ಲಿನ ರಾಜಾಜಿನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಒಕಿನೊವಾ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಸೋಮವಾರ ಮಧ್ಯಾಹ್ನ ಅಗ್ನಿ ಅವಘಢ ಸಂಭವಿಸಿದ್ದು, 30ಕ್ಕೂ ಹೆಚ್ಚು ಬೈಕ್ಗಳು ಅಗ್ನಿ ಆಹುತಿಯಾಗಿವೆ.
ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷರ್ಣಾಧದಲ್ಲಿ ಅಗ್ನಿ ವ್ಯಾಪ್ತಿಸಿ ಅನಾಹುತ ಸಂಭವಿಸಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ ಶೋ ರೂಮ್ನಲ್ಲಿ ಎಂದಿನಂತೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಾಗ ಸಿಬ್ಬಂದಿ ಹೊರಬಂದಿದ್ದು, ಆನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ವಾಹನಗಳು ರಸ್ತೆಯಲ್ಲಿ ನಿಂತಿದ್ದರಿಂದ ಈ ಮಾರ್ಗದಲ್ಲಿ ಕಿಲೋಮೀಟರ್ಗಟ್ಟಲೆ ಸಂಚಾರದಟ್ಟಣೆ ಕಂಡುಬಂದಿತು.
ಈ ಒಕಿನೊವಾ ಬೈಕ್ ಶೋರೂಂ ಇತ್ತೀಚಿಗೆ RTO ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಪಾಸಣೆ ವೇಳೆ 250 ವ್ಯಾಟ್ ಬ್ಯಾಟರಿ ಬಳಕೆಯ 25 ಕೀ.ಮೀ ವೇಗದ ವಾಹನಗಳಿಗೆ ಮಾತ್ರ ಪರವಾನಗಿ ಪಡೆಯಲಾಗಿತ್ತು. ಆದರೆ ಶೋ ರೂಮ್ನಲ್ಲಿ ನಿಗದಿಗಿಂತ ಹೆಚ್ಚಿನ ಸಾಮಥ್ರ್ಯ ಬಳಕೆ ಬ್ಯಾಟರಿ ಬಳಸುತ್ತಿದ್ದರು ಎನ್ನುವ ದೂರು ಇದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.
ಘಟನೆ ಬಗ್ಗೆ 2 ಗಂಟೆ ಸುಮಾರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಬಂದು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ದುರಂತದ ವೇಳೆ ನಾಲ್ವರು ಸಿಬ್ಬಂದಿ ಹೊರಬಂದಿದ್ದರಿಂದ ಸಾವು-ನೋವು ಕಂಡುಬಂದಿಲ್ಲ. ಶೋ ರೂಮ್ನಲ್ಲಿ 74 ದ್ವಿಚಕ್ರವಾಹನಗಳಿದ್ದು, ಈ ಪೈಕಿ 19 ವಾಹನಗಳು ಸಂಪೂರ್ಣ ಹಾನಿಯಾಗಿವೆ. 9 ಇವಿ ಬೈಕ್ ಭಾಗಶಃ ಸುಟ್ಟಿವೆ. ಘಟನೆಗೆ ಶಾರ್ಟ್ ಸಕ್ರ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಕಿಶೋರ್ ತಿಳಿಸಿದ್ದಾರೆ.







