ನಕಲಿ ನೋಟು ತಯಾರಿಕೆ ಆರೋಪ: ಓರ್ವನ ಬಂಧನ
ಬೆಂಗಳೂರು: ನಕಲಿ ನೋಟು ತಯಾರಿಸುವ ಆರೋಪದಡಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಿರುವುದು ವರದಿಯಾಗಿದೆ.
ಬಳ್ಳಾರಿ ಮೂಲದ ಮಹೇಂದರ್ ಬಂಧಿತ ಆರೋಪಿಯಾಗಿದ್ದು, ನಕಲಿ ನೋಟು ತಯಾರಿಕೆಯ ಖಚಿತ ಮಾಹಿತಿಯನ್ನು ಆಧರಿಸಿ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಆರೋಪಿ ಮಹೇಂದರ್ ಮನೆಯಲ್ಲೇ 500, 200, 100 ರೂ.ಮುಖಬೆಲೆಯ ನಕಲಿ ನೋಟು ತಯಾರಿಸುತ್ತಿದ್ದ ಎನ್ನಲಾಗಿದ್ದು, ನೋಟು ತಯಾರಿಸುವ ಪೇಪರ್, ಮುದ್ರಣ ಯಂತ್ರವನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ಗೊತ್ತಾಗಿದೆ.
Next Story