ಏಡ್ಸ್ ನಿಯಂತ್ರಣ ಸೊಸೈಟಿ ಒಂಬುಡ್ಸ್ಮನ್ ಆಗಿ ಗುರುದತ್ತ ಹೆಗ್ಡೆ ನೇಮಕ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಗುರುದತ್ತ ಹೆಗ್ಡೆ ಅವರಿಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಒಂಬುಡ್ಸ್ಮನ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಅ. 22ರಂದು ಹೊರಡಿಸಿರುವ ಅಧಿಸೂಚನೆಯಂತೆ, ಈ ನೇಮಕ ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಅವರು ಜವಾಬ್ದಾರಿ ನಿರ್ವಹಿಸಲಿದ್ದಾರೆ.
2014ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಗುರುದತ್ತ ಹೆಗ್ಡೆ ಅವರ ಒಂಬುಡ್ಸ್ಮನ್ ಹುದ್ದೆಯನ್ನು, 2016ರ ಐಎಎಸ್ (ವೇತನ) ನಿಯಮಗಳ ಅಡಿಯಲ್ಲಿ ಮುನ್ಸಿಪಲ್ ಆಡಳಿತ ನಿರ್ದೇಶಕರ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಹುದ್ದೆಯೆಂದು ಘೋಷಿಸಲಾಗಿದೆ.
Next Story




