Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ‘ಡಾ.ಜಿ.ಪರಮೇಶ್ವರ್ ಅಪರೂಪದ ನಾಯಕ’;...

‘ಡಾ.ಜಿ.ಪರಮೇಶ್ವರ್ ಅಪರೂಪದ ನಾಯಕ’; ವೈಯಕ್ತಿಕ ತೇಜೋವಧೆ ಹೇಯ ಕೃತ್ಯ : ಎಚ್. ಆಂಜನೇಯ

ವಾರ್ತಾಭಾರತಿವಾರ್ತಾಭಾರತಿ13 Nov 2025 9:44 PM IST
share
‘ಡಾ.ಜಿ.ಪರಮೇಶ್ವರ್ ಅಪರೂಪದ ನಾಯಕ’; ವೈಯಕ್ತಿಕ ತೇಜೋವಧೆ ಹೇಯ ಕೃತ್ಯ : ಎಚ್. ಆಂಜನೇಯ

ಬೆಂಗಳೂರು : ‘ರಾಜ್ಯವನ್ನು ಆಳುವ ಎಲ್ಲ ಗುಣಲಕ್ಷಣ ಹೊಂದಿರುವ ಸಭ್ಯ, ಸರಳ ಸಜ್ಜನಿಕೆ ಪ್ರತಿರೂಪದ ಜನನಾಯಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಮಾನಸಿಕವಾಗಿ ಕುಗ್ಗಿಸುವ ರೀತಿ ವೈಯಕ್ತಿಕ ನಿಂದನೆ ಮಾಡಿರುವುದು ಬಿಜೆಪಿಯ ಕೆಟ್ಟ ನಡೆಯಾಗಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಟೀಕಿಸಿದ್ದಾರೆ.

ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೃಹ ಸಚಿವರಾಗಿ ಡಾ. ಪರಮೇಶ್ವರ್ ಅವರು ನಾಡಿನಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿವಾದಾತ್ಮಕ ಹೇಳಿಕೆಯಿಂದ ದೂರ ಇದ್ದಾರೆ. ಆಡಳಿತದಲ್ಲಿ ಲೋಪಗಳಿದ್ದರೇ ಟೀಕೆ ಮಾಡಲು ಅಡ್ಡಿಯಿಲ್ಲ. ಆದರೆ, ಅವರ ಕುಟುಂಬ, ವೈಯಕ್ತಿಕ ತೇಜೋವಧೆ ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಸಂತೋಷ್‌ ಎಂಬಾತ ಪರಮೇಶ್ವರ್ ಕುಟುಂಬದ ವಿಷಯವನ್ನು ಮುಂದಿಟ್ಟುಕೊಂಡು ಟೀಕೆ ಮಾಡಿರುವುದು ಬೇಸರ ಮೂಡಿಸಿದೆ. ರಾಜಕೀಯ ಟೀಕೆ ಮಾಡಲು ಎಲ್ಲರಿಗೂ ಅಭಿವ್ಯಕ್ತಿ ಸ್ವತಂತ್ರ ಇದೆ. ಆದರೆ, ವೈಯಕ್ತಿಕವಾಗಿ ನಿಂದನೆ, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸರಿಯಲ್ಲ ಎಂದು ಆಂಜನೇಯ ಆಕ್ಷೇಪಿಸಿದರು.

ಹರಿಬಿಟ್ಟ ಆತನಿಗೆ ಬುದ್ಧಿಮಾತು ಹೇಳುವುದು ಬಿಟ್ಟು, ಬಿಜೆಪಿ ಸಮರ್ಥನೆಗೆ ಇಳಿದಿರುವುದು ಗಮನಿಸಿದರೆ ಇಂತಹ ಕೆಲಸಗಳಿಗೆ ಅವರು ತರಬೇತಿ ನೀಡುತ್ತಿದ್ದಾರೆಂಬ ಸಂಶಯ ಮೂಡುತ್ತದೆ. ಪರಮೇಶ್ವರ್ ವಿರುದ್ಧ ನಾಲಿಗೆ ಹರಿಬಿಟ್ಟ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟಕ್ಕೆ ನಾವು ಸಮಾಧಾನಗೊಳ್ಳುವುದಿಲ್ಲ. ಆತನನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದರು.

ಡಾ.ಪರಮೇಶ್ವರ್ ಹಾಗೂ ನಾನು ಇಬ್ಬರು ಹಿಂದೂಗಳೇ. ಹಿಂದೂಧರ್ಮದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಮೌಢ್ಯಾಚರಣೆ, ಕಂದಾಚಾರದ ಸುಳಿಗೆ ಸಿಲುಕಿ ನೋವು ಉಣ್ಣುತ್ತಿದ್ದರೂ ನಾವು ಹಿಂದೂಗಳಾಗಿಯೇ ಇದ್ದೇವೆ. ರಾಜ್ಯದಲ್ಲಿ ನಮ್ಮ ಸಮುದಾಯವು ಹಿಂದೂಧರ್ಮದಲ್ಲಿಯೇ ಇದೆ. ಆದರೆ, ನಮ್ಮನ್ನು ಮನುಷ್ಯರನ್ನಾಗಿ ನೋಡುವ ಹೃದಯವಂತಿಕೆಯನ್ನೆ ಇವರು ಪ್ರದರ್ಶಿಸುತ್ತಿಲ್ಲ. ಇದಕ್ಕೆಲ್ಲ ಕಾರಣ ಬಿಜೆಪಿ ಕೆಟ್ಟ ಮನಸ್ಥಿತಿಯವರನ್ನು ಹುಟ್ಟುಹಾಕಿ, ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ಎಂದು ಅವರು ಬೇಸರಿಸಿದರು.

ಹಿಂದೂಧರ್ಮ ಪ್ರಚಾರ ಕಾರ್ಯ ಕೈಗೊಂಡು, ಅದರಲ್ಲಿನ ಲೋಪ, ಅಸಮಾನತೆ ಸರಿಪಡಿಸಲು ಮುಂದಾಗಬೇಕು. ಆದರೆ, ಇನ್ನಷ್ಟು ಲೋಪಗಳು ಆಗುವ ರೀತಿ ವರ್ತನೆಗಳು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಮನನೊಂದು ಅಂಬೇಡ್ಕರ್ ಹಿಂದೂಧರ್ಮ ತೊರೆದು, ಬೌದ್ಧಧರ್ಮಕ್ಕೆ ಸೇರ್ಪಡೆ ಆಗಿದ್ದು ಎಂಬ ಅರಿವು ಇರಬೇಕು ಎಂದು ಅವರು ಹೇಳಿದರು.

ಎಷ್ಟೇ ಅಪಮಾನ, ಅವಮಾನ, ಅಸ್ಪೃಶ್ಯತೆ ಇದ್ದರೂ ನಾವುಗಳಂತೂ ಹಿಂದೂಗಳಾಗಿಯೇ ಇರುತ್ತೇವೆ. ಹಿಂದೂಧರ್ಮದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕೆಂಬ ಬಯಸುತ್ತೇವೆ. ಎಲ್ಲರನ್ನು ಮನುಷ್ಯರ ರೀತಿ ಕಾಣಬೇಕೆಂಬ ಕಾರಣಕ್ಕೆ ಪದೇ ಪದೆ ಮಾತನಾಡುತ್ತೇವೆ. ಅದನ್ನೇ ತಿರುಚಿ ಮರು ಟೀಕೆ ಮಾಡಿದರೇ ಹೇಗೆ? ಎಂದು ಆಂಜನೇಯ ಪ್ರಶ್ನಿಸಿದರು.

ಸರಕಾರದ ವೈಫಲ್ಯ, ಆಡಳಿತದಲ್ಲಿನ ಲೋಪಗಳು ಕಂಡುಬಂದರೇ ಟೀಕೆ ಮಾಡಲಿ. ಅದು ಆರೋಗ್ಯಕರವಾಗಿರಬೇಕು. ಮನಸ್ಸಿಗೆ ನೋವುಂಟು ಮಾಡಬಾರದು. ಅಸ್ಪೃಶ್ಯ ಸಮುದಾಯದಲ್ಲಿ ನಾಯಕರಾಗಿ ಹೊರಹೊಮ್ಮುವುದೇ ಕಷ್ಟಕರ. ಅಂತಹದ್ದರಲ್ಲಿ ಸಜ್ಜನ ರಾಜಕಾರಣಿ ಪರಮೇಶ್ವರ್‍ರ ಮನಸ್ಸಿಗೆ ಆಘಾತವಾಗುವ ರೀತಿ ಟೀಕೆ ಮಾಡಿರುವುದು ಅಮಾನವೀಯ ಎಂದು ಅವರು ವಾಗ್ದಾಳಿ ನಡೆಸಿದರು.

Tags

H. Anjaneya
share
ವಾರ್ತಾಭಾರತಿ
ವಾರ್ತಾಭಾರತಿ
Next Story
X