‘ಕೆಪಿಎಸ್ಸಿ’ ಅನ್ಯಾಯ ಸರಿಪಡಿಸಿ : ಹಂಪ ನಾಗರಾಜಯ್ಯ

ಪ್ರೊ.ಹಂಪ ಹಂಪನಾಗರಾಜಯ್ಯ
ಬೆಂಗಳೂರು : ಕೆಪಿಎಸ್ಸಿ ಪ್ರೊಬೆಷನರಿ ಹುದ್ದೆಗಳ ಪ್ರಶ್ನೆ ಪತ್ರಿಕೆಯನ್ನು ಸರಿ ಪಡಿಸುವುದಕ್ಕಿಂತ ಕನ್ನಡ ಮಾದ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ ಎಂದು ಹಿರಿಯ ಸಾಹಿತಿ ನಾಡೋಜ ಪ್ರೊ.ಹಂಪ ಹಂಪನಾಗರಾಜಯ್ಯ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಇತ್ತೀಚಿಗೆ ಕೆಪಿಎಸ್ಸಿ ನಡೆಸಿದ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆ ಕುರಿತು ದಿನ ನಿತ್ಯ ಆಕ್ಷೇಪದ ವರದಿಗಳನ್ನು ಗಮನಿಸಿ, ದಿಗ್ಬ್ರಮೆ ಆಗುತ್ತಿದೆ. ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ತಪ್ಪುಗಳನ್ನು ಉದಾಹರಣೆ ಸಹಿತ ಪ್ರಕಟಿಸಿ, ಸರಕಾರದ ಗಮನಕ್ಕೆ ತಂದಿರುತ್ತಾರೆ. ಪ್ರಶ್ನೆ ಪತ್ರಿಕೆಯನ್ನು ನೇರವಾಗಿ ಕನ್ನಡದಲ್ಲಿ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಶ್ನೆ ಪತ್ರಿಕೆಯನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದ್ದು, ಅದರಿಂದ ಅನೇಕ ತಪ್ಪುಗಳಾಗಿವೆ. ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ಮರು ಪರೀಕ್ಷೆ ನಡೆಸಲು ಶೀಘ್ರ ಕ್ರಮವಹಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.





