ನೂತನ ಮೀಸಲಾತಿ ಅನ್ವಯವೇ ನೇಮಕಾತಿ : ಸಚಿವ ಎಚ್.ಸಿ.ಮಹದೇವಪ್ಪ ಸ್ಪಷ್ಟನೆ

ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು : ಸರಕಾರವು ಸೂಕ್ತ ಹೋರಾಟದ ಮೂಲಕ ನೂತನ ಮೀಸಲಾತಿ ಸೂತ್ರವನ್ನು ಜಾರಿಗೊಳಿಸಿ ಅದರ ಅನ್ವಯವೇ ನೇಮಕಾತಿಯನ್ನು ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಧರಣಿ ನಡೆಯುತ್ತಿರುವ ವಿಚಾರ ಸಂಬಂಧ ಸೋಮವಾರ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ್ದ ವೇಳೆ ಮಹದೇವಪ್ಪ ಅವರು, ‘ಹಳೇ ಮೀಸಲಾತಿಯಂತೆ ಖಾಲಿ ಹುದ್ದೆಗಳು ಭರ್ತಿ’ ಎಂದು ಹೇಳಿರುವುದು ವಾರ್ತಾಭಾರತಿಯಲ್ಲಿ ಪ್ರಕಟವಾಗಿತ್ತು.
ಈ ಸಂಬಂಧ ಮಂಗಳವಾರ ಸ್ಪಷ್ಟನೆ ನೀಡಿರುವ ಅವರು, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪರ ವಿರೋಧದ ಚರ್ಚೆಗಳು ನಡೆಯುತ್ತಿರುವಾಗ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲು ನಮ್ಮ ಸರಕಾರವು ಬದ್ಧವಾಗಿದ್ದು, ಇದಕ್ಕೆ ಪೂರಕವಾದ ಕಾನೂನು ಹೋರಾಟವನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
Next Story







