‘ಜಿಬಿಎ’ ಸಾಫ್ಟ್‌ವೇರ್ ಬಳಕೆಗೆ ಶುಲ್ಕ : ಇದು ಪಿಕ್‍ಪಾಕೆಟ್ ಅಲ್ಲದೆ ಮತ್ತೇನು?: ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಆನ್‍ಲೈನ್ ಸೇವೆಗಳನ್ನು ಬಳಸುತ್ತಿರುವ ಆಸ್ತಿ ಮಾಲಕರಿಗೆ ಸಾಫ್ಟ್‌ವೇರ್ ಶುಲ್ಕ ವಿಧಿಸುವ ಕ್ರಮಕ್ಕೆ ಆಕ್ಷೇಪಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ನಿಜ, ಸುಲಿಗೆಯಲ್ಲಿ ಈ ಸರಕಾರ 50 ವರ್ಷಗಳ ದಾಖಲೆ ಸರಿಗಟ್ಟಲಿದೆ. ಸೇವೆಗೆ 10 ಸಾವಿರ ರೂ.ವರೆಗೂ ಶುಲ್ಕ. ಇದು ಪಿಕ್‍ಪಾಕೆಟ್ ಅಲ್ಲದೆ ಮತ್ತೇನು?’ ಎಂದು ಪ್ರಶ್ನಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಂದ ಮೇಲೆ ಬೆಂಗಳೂರು ‘ಗ್ರೇಟ್' ಆಗುತ್ತದೆ. ಕೆಂಪೇಗೌಡರು ಕಟ್ಟಿದ ಈ ಮಹಾನಗರದ ವ್ಯಾಪ್ತಿ ಹಿಗ್ಗಿಸಿದರೆ ಅಭಿವೃದ್ಧಿಗೆ ಅನುಕೂಲ. 50ವರ್ಷಗಳಲ್ಲಿ ಯಾರೂ ಮಾಡದ ಕೆಲಸ ನಾವು ಮಾಡುತ್ತಿದ್ದೇವೆ. ನಿಮ್ಮ ಆಸ್ತಿ, ನಿಮ್ಮ ಹಕ್ಕು; ನಿಮ್ಮ ಮನೆ ಬಾಗಿಲಿಗೇ ದಾಖಲೆಗಳನ್ನು ತಲುಪಿಸುತ್ತೇವೆ ಎಂದು ಸುಳ್ಳು.. ಹಸಿಸುಳ್ಳು... ಸುಳ್ಳು ಹೇಳುವುದಕ್ಕೆ ಸಂಕೋಚವಿಲ್ಲ, ಸುಲಿಗೆಗೆ ನಾಚಿಕೆಯೂ ಇಲ್ಲ’ ಎಂದು ಲೇವಡಿ ಮಾಡಿದ್ದಾರೆ.
‘ಬೆಂಗಳೂರು ವ್ಯಾಪ್ತಿ ಹಿಗ್ಗಿಸುವುದು ಎಂದರೆ ಸುಲಿಗೆಗೆ ‘ವ್ಯಾಪಕ' ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು. ರಾಜ್ಯ ಕಾಂಗ್ರೆಸ್ ಸರಕಾರ ಅದನ್ನೇ ಮಾಡಿದೆ. ಸಾಫ್ಟ್ ವೇರ್ ಹೆಸರಿನಲ್ಲಿ ನಾಗರಿಕರ ಜೇಬಿಗೆ ‘ಕೈ' ಹಾಕಿದೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎಟಿಎಂ ಆಗಿದೆ’ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ.
•ಗ್ರೇಟರ್ ಬೆಂಗಳೂರು ಪ್ರಾಧಿಕಾರ (#GBA) ಬಂದ ಮೇಲೆ ಬೆಂಗಳೂರು 'ಗ್ರೇಟ್' ಆಗುತ್ತದೆ!
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 20, 2026
•ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಮಹಾನಗರದ ವ್ಯಾಪ್ತಿ ಹಿಗ್ಗಿಸಿದರೆ ಅಭಿವೃದ್ಧಿಗೆ ಅನುಕೂಲ!!
•50 ವರ್ಷಗಳಲ್ಲಿ ಯಾರೂ ಮಾಡದ ಕೆಲಸ ನಾವು ಮಾಡುತ್ತಿದ್ದೇವೆ!!!
•ನಿಮ್ಮ ಆಸ್ತಿ, ನಿಮ್ಮ ಹಕ್ಕು; ನಿಮ್ಮ ಮನೆ ಬಾಗಿಲಿಗೇ ದಾಖಲೆಗಳನ್ನು… pic.twitter.com/cSpIlYDwi3






