ರೇಣುಕಸ್ವಾಮಿ ಕೊಲೆ ಪ್ರಕರಣ | ಇಂದು ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಕುರಿತ ಅರ್ಜಿ ವಿಚಾರಣೆ

ನಟ ದರ್ಶನ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ನಟ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಸಂಬಂಧ ಮಂಗಳವಾರ(ನ.3) 59 ಸಿಸಿಎಚ್ ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಲಿದೆ.
ಸದ್ಯ ಸುಪ್ರೀಂ ಕೋರ್ಟ್ ನಿಂದ ಜಾಮೀನು ರದ್ದುಗೊಂಡು ಪರಪ್ಪನ ಆಗ್ರಹಾರದಲ್ಲಿ ಕಂಬಿ ಎಣಿಸುತ್ತಿರುವ ದರ್ಶನ್ ತನಗೆ ಬೆನ್ನು ನೋವು ಉಲ್ಬಣಗೊಂಡಿದೆ, ಹೀಗಾಗಿ ಜೈಲಿನಲ್ಲಿ ಫಿಸಿಯೋ ಥೆರಪಿಗೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ
ಈ ಅರ್ಜಿಯನ್ನ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದ್ದು, ಪ್ರಾಸಿಕ್ಯೂಷನ್ ದರ್ಶನ್ ಅರ್ಜಿಗೆ ಅಕ್ಷೇಪ ಸಲ್ಲಿಸಲಿದ್ದಾರೆ. ದರ್ಶನ್ ಪರ ವಕೀಲರು ದರ್ಶನ್ ಗೆ ಚಿಕಿತ್ಸೆಯ ಅವಶ್ಯಕತೆ ಬಗ್ಗೆ ವಾದ ಮಂಡಿಸಲಿದ್ದಾರೆ.
Next Story




