ವಕ್ಸ್ ಮಂಡಳಿಗೆ ಐವರು ಸದಸ್ಯರ ನೇಮಕ ವಿಚಾರ | ಆಕ್ಷೇಪ ಸಲ್ಲಿಸಲು ರಾಜ್ಯ ಸರಕಾರಕ್ಕೆ ಕಾಲಾವಕಾಶ

ಬೆಂಗಳೂರು : ಕರ್ನಾಟಕ ರಾಜ್ಯ ವಕ್ಸ್ ಮಂಡಳಿಗೆ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಶಾಸಕಿ ಕನೀಝ್ ಫಾತಿಮಾ ಸೇರಿದಂತೆ ಐವರು ಸದಸ್ಯರನ್ನು ನೇಮಕ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಯಾದಗಿರಿಯ ನಿವಾಸಿ ಸೈಯದ್ ಖುಸ್ರೋ ಹುಸೇನಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿಗೆ ಆಕ್ಷೇಪ ಸಲ್ಲಿಸಲು ರಾಜ್ಯ ಸರಕಾರ ಹಾಗೂ ವಕ್ಸ್ ಮಂಡಳಿಗೆ ಸದಸ್ಯರಿಗೆ ಹೈಕೋರ್ಟ್ ಎರಡು ವಾರ ಕಾಲಾವಕಾಶ ನೀಡಿ ಮುಂದೂಡಿದೆ.
2024ರ ಅ.31ರಲ್ಲಿ ಸೈಯದ್ ನಾಸೀರ್ ಹುಸೇನ್, ಕನೀಝ್ ಫಾತಿಮಾ, ಆರ್.ಅಬ್ದುಲ್ ರಿಯಾಝ್ ಖಾನ್, ಆಸೀಫ್ ಅಲಿ ಶೇಕ್ ಹುಸೇನ್, ಕೆ.ಅನ್ವರ್ ಬಾಷಾ ವಕ್ಸ್ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಇವರು ವಕ್ಸ್ ಮಂಡಳಿ ಸದಸ್ಯರಾಗಿದ್ದಾಗ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ವಕ್ಸ್ ಆಸ್ತಿಗಳ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನೇಮಕಾತಿ ರದುಗೊಳಿಸಲು ಮನವಿ ಮಾಡಲಾಗಿದೆ.
Next Story





