ಪ್ರಾಸಿಕ್ಯೂಷನ್ ನಿರ್ದೇಶಕಿ ಅಂಜಲಿ ದೇವಿ ಮುಂದುವರಿಕೆಗೆ ಹೈಕೋರ್ಟ್ ಅಸ್ತು

ಬೆಂಗಳೂರು : ಕರ್ನಾಟಕ ಪ್ರಾಸಿಕ್ಯೂಷನ್ ಮತ್ತು ಸರ್ಕಾರಿ ವಾಜ್ಯಗಳ ಇಲಾಖೆ ನಿರ್ದೇಶಕಿಯಾಗಿ ಅಂಜಲಿ ದೇವಿ ಮುಂದುವರಿಕೆಗೆ ತಡೆಯಾಜ್ಞೆ ನೀಡಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕೆಎಟಿಯ ಮಧ್ಯಂತರ ಆದೇಶ ಪ್ರಶ್ನಿಸಿ ಅಂಜಲಿ ದೇವಿ (57) ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಹೈಕೋರ್ಟ್‌ನ ಈಗಿನ ಆದೇಶದಲ್ಲಿ ನ್ಯಾಯಮಂಡಳಿಯ ನಿರ್ದೇಶನದಂತೆ ಡಿಪಿಸಿ (ಡಿಪಾರ್ಟ್‌ಮೆಂಟಲ್ ಪ್ರಮೋಷನ್ ಕಮಿಟಿ) ಮತ್ತು ಅಂಜಲಿ ದೇವಿ ಮುಂದುವರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಲಾಗಿದೆ.
Next Story




