Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಕುರ್ ಆನ್-ಹದೀಸ್‍ನಲ್ಲಿರುವ ವಿಚಾರಗಳು...

ಕುರ್ ಆನ್-ಹದೀಸ್‍ನಲ್ಲಿರುವ ವಿಚಾರಗಳು ಎಲ್ಲರ ಮನಸ್ಸುಗಳಿಗೆ ತಲುಪಬೇಕು: ಶ್ರೀ ಶಿವರುದ್ರಸ್ವಾಮಿ

ಪ್ರವಾದಿ ಮುಹಮ್ಮದ್(ಸ)ರವರ ನೈಜ ಚಿತ್ರಣ ಪುಸ್ತಕ ಲೋಕಾರ್ಪಣೆ

ವಾರ್ತಾಭಾರತಿವಾರ್ತಾಭಾರತಿ27 Nov 2023 11:51 PM IST
share
ಕುರ್ ಆನ್-ಹದೀಸ್‍ನಲ್ಲಿರುವ ವಿಚಾರಗಳು ಎಲ್ಲರ ಮನಸ್ಸುಗಳಿಗೆ ತಲುಪಬೇಕು: ಶ್ರೀ ಶಿವರುದ್ರಸ್ವಾಮಿ

ಬೆಂಗಳೂರು: ಮಿನ್ಹಾಜುಲ್ ಕುರ್‍ಆನ್ ಇಂಟರ್‍ನ್ಯಾಷನಲ್ ಇಂಡಿಯಾ(ಕರ್ನಾಟಕ) ದ ವತಿಯಿಂದ ಇದೇ ಮೊಟ್ಟಮೊದಲ ಬಾರಿಗೆ ಪ್ರವಾದಿ ಮುಹಮ್ಮದ್(ಸ)ರವರ ಕುರಿತು ಕನ್ನಡದಲ್ಲಿ ಪುಸ್ತಕ ಪ್ರಕಟ ಮಾಡಿರುವುದು ಶ್ಲಾಘನೀಯ ಎಂದು ಬೇಲಿಮಠದ ಶ್ರೀ ಶಿವರುದ್ರ ಸ್ವಾಮಿ ಹೇಳಿದರು.

ನಗರದ ಶೇಷಾದ್ರಿಪುರಂನಲ್ಲಿರುವ ಕೆಎಂಡಿಸಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶೈಖುಲ್ ಇಸ್ಲಾಮ್ ಡಾ.ಮುಹಮ್ಮದ್ ತಾಹಿರುಲ್ ಖಾದ್ರಿ ಅವರು ಆಂಗ್ಲ ಭಾಷೆಯಲ್ಲಿ ರಚಿಸಿರುವ ʼದಿ ರಿಯಲ್ ಸ್ಕೆಚ್ ಆಫ್ ದ ಪ್ರಾಫೆಟ್ ಮುಹಮ್ಮದ್(ಸ)ʼ ಪುಸ್ತಕದ ಕನ್ನಡ ಭಾಷಾಂತರ ಕೃತಿ ‘ಪ್ರವಾದಿ ಮುಹಮ್ಮದ್(ಸ)ರವರ ನೈಜ ಚಿತ್ರಣ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪ್ರವಾದಿಯವರು ಪ್ರತಿಯೊಂದು ವಿಚಾರದಲ್ಲಿಯೂ ಪರಿಪೂರ್ಣತೆಯನ್ನು ಸಾಧಿಸಿದವರು ಎಂಬುದರಲ್ಲಿ ಯಾವುದೆ ಉತ್ಪ್ರೇಕ್ಷೆಯಿಲ್ಲ. ಕುರ್ ಆನ್ ಹಾಗೂ ಹದೀಸ್ ಬಗ್ಗೆ ನಾವು ಅದ್ಭುತವಾಗಿ ಮಾತನಾಡುತ್ತೇವೆ. ಆದರೆ, ನಮ್ಮ ಜೀವನದಲ್ಲಿ ಅದರಲ್ಲಿರುವ ಅಂಶಗಳು ಆಚರಣೆಯಲ್ಲಿವೆಯೆ? ಎಂಬುದನ್ನು ಗಮನಿಸಬೇಕು. ಅಲ್ಲದೆ, ಅರೆಬಿಕ್ ಭಾಷೆಯಲ್ಲಿರುವ ಕುರ್ ಆನ್ ಹಾಗೂ ಹದೀಸ್‍ನಲ್ಲಿರುವ ವಿಚಾರಗಳು ಎಲ್ಲ ಭಾಷೆಗಳಲ್ಲಿ ಎಲ್ಲರ ಮನಸ್ಸುಗಳಿಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಇಸ್ಲಾಮ್ ಅಂದರೆ ಶಾಂತಿ. ಆದರೆ, ಇವತ್ತಿನ ಕಾಲಘಟ್ಟದಲ್ಲಿ ನಮ್ಮನ್ನು ದಾರಿ ತಪ್ಪಿಸಿ, ನಮ್ಮ ಧರ್ಮಪ್ರಜ್ಞೆಯನ್ನು ಬೇರೆ ರೀತಿ ಬಳಸಿಕೊಳ್ಳುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಅಹಿಂಸೆ, ಕ್ರೌರ್ಯ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಪ್ರವಾದಿಯ ಬೋಧನೆಯಂತೆ ಆತ್ಮನಿರೀಕ್ಷಣೆ ಮಾಡಿಕೊಂಡರೆ ಈ ಎಲ್ಲ ಸಮಸ್ಯೆಗಳಿಗೂ ಖಂಡಿತ ಪರಿಹಾರ ಇದೆ ಎಂದು ಶಿವರುದ್ರಸ್ವಾಮಿ ಹೇಳಿದರು.

ಮಿನ್ಹಾಜುಲ್ ಕುರ್ ಆನ್ ಸಂಸ್ಥೆಯವರು ಈಗಾಗಲೆ ಪ್ರಪಂಚದ ಬೇರೆ ಬೇರೆ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈಗ ಕನ್ನಡದಲ್ಲಿಯೂ ಪ್ರವಾದಿ ಮುಹಮ್ಮದ್(ಸ)ರವರ ನೈಜ ಚಿತ್ರಣ ಎಂಬ ಪುಸ್ತಕ ಪ್ರಕಟಿಸಿರುವುದು ಯೋಗ್ಯವಾದ ಕೆಲಸ. ಈ ಪುಸ್ತಕ ಎಲ್ಲರಿಗೂ ಸಿಗಲಿ, ಪ್ರವಾದಿಯ ವ್ಯಕ್ತಿತ್ವ, ಬೋಧನೆಯನ್ನು ಎಲ್ಲರೂ ತಿಳಿದುಕೊಳ್ಳುವಂತಾಗಲಿ ಎಂದು ಅವರು ಹಾರೈಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ ಮಾತನಾಡಿ, ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಅಪನಂಬಿಕೆಗಳು ಹೆಚ್ಚುತ್ತಿವೆ. ಅವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಿನ್ಹಾಜುಲ್ ಕುರ್ ಆನ್ ಸಂಸ್ಥೆಯು ಕನ್ನಡ ಭಾಷೆಯಲ್ಲಿ ಪುಸ್ತಕ ಹೊರತಂದಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಧಾರ್ಮಿಕ ಪುಸ್ತಕಗಳನ್ನು ಅರ್ಥಪೂರ್ಣವಾಗಿ ಅಧ್ಯಯನ ಮಾಡಿದಾಗ, ಅದರಲ್ಲಿರುವ ವಿಚಾರಗಳು ನಮಗೆ ತಿಳಿಯುತ್ತವೆ. ಧರ್ಮ, ಜಾತಿ, ಭಾಷೆ, ಬಣ್ಣದ ಆಧಾರದಲ್ಲಿ ಜನರನ್ನು ವಿಂಗಡಿಸುತ್ತಿದ್ದೇವೆ. ಇದಕ್ಕೆ ಅಂತ್ಯ ಯಾವಾಗ? ಇಸ್ಲಾಮ್ ಧರ್ಮದಲ್ಲಿ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಆದರೆ, ನಾವು ಅದನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಆದುದರಿಂದ, ನಾನು ಕುರ್ ಆನ್ ನ ಬಗ್ಗೆ ಅಧ್ಯಯನ ಮಾಡಿಸಿ ವೈಜ್ಞಾನಿಕವಾಗಿ ಇದರಿಂದ ಇರುವ ಪ್ರಯೋಜನದ ಬಗ್ಗೆ ಪುಸ್ತಕ ಬರೆಸುತ್ತಿದ್ದೇನೆ. ಅಲ್ಲದೆ, ಕುರ್ ಆನ್ ನಲ್ಲಿ ಪದೇ ಪದೇ ಪುನರಾವರ್ತನೆಯಾಗಿರುವ ಸುಮಾರು 2 ಸಾವಿರ ಅರೆಬಿಕ್ ಪದಗಳ ಅರ್ಥವನ್ನು ಉರ್ದು, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಬರೆಸುತ್ತಿದ್ದೇನೆ ಎಂದು ಅಬ್ದುಲ್ ಅಝೀಂ ಹೇಳಿದರು.

ಕಾರ್ಯಕ್ರಮದಲ್ಲಿ ಮಿನ್ಹಾಜುಲ್ ಕುರ್ ಆನ್ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ಪಬ್ಲಿಕೇಷನ್ ವಿಭಾಗದ ಅಧ್ಯಕ್ಷ ನಾದಿ ಅಲಿ, ರಾಜ್ಯ ಘಟಕದ ಅಧ್ಯಕ್ಷ ಸೈಯದ್ ಫರಾಝ್ ಮುಹಿಯುದ್ದೀನ್, ಕಾರ್ಯಾಧ್ಯಕ್ಷ ಫೈಝುಲ್ಲಾ ಬೇಗ್ ಜುನೇದಿ, ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅನ್ಸಾರಿ, ಸದಸ್ಯರಾದ ಉಸ್ಮಾನ್ ಶರೀಫ್, ಮುನೀರ್ ಅಹ್ಮದ್ ಜಾಮಿ, ಇಸ್ಮಾಯಿಲ್ ಖಾನ್, ಪರ್ವೇಝ್ ಅಲಿಖಾನ್, ಮುಹಮ್ಮದ್ ಮುಸ್ತಫಾ ಅನುವಾದಕಾರದ ಅಮಾನುಲ್ಲಾ ಖಾನ್, ಖೈಸರ್ ಜಹಾನ್ ಹಾಗೂ ಪರಿಶೀಲನಾಕಾರ ಮೌಲಾನ ಮುಸ್ತಫಾ ಕಮಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X