ಕಾಂಗ್ರೆಸ್ ರಾಜ್ಯ ವಕ್ತಾರರಾಗಿ ಇರ್ಷಾದ್ ನೇಮಕ

ಇರ್ಷಾದ್ ಅಹ್ಮದ್ ಶೇಕ್
ಬೆಂಗಳೂರು, ನ.14:ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಇರ್ಷಾದ್ ಅಹ್ಮದ್ ಶೇಕ್ ಅವರನ್ನು ಕೆಪಿಸಿಸಿಯ ರಾಜ್ಯ ಮಟ್ಟದ ವಕ್ತಾರರನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದು, ತಕ್ಷಣವೇ ಜಾರಿ ಬರುವಂತೆ ಇರ್ಷಾದ್ ಅಹ್ಮದ್ ಶೇಕ್ ಅವರನ್ನು ಕೆಪಿಸಿಸಿಯ ರಾಜ್ಯ ಮಟ್ಟದ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





