ಕನ್ನಡ ಸಾಹಿತ್ಯ ಪರಿಷತ್ | ಜ.30ರಿಂದ ಫೆ.1ರ ವರೆಗೆ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆ

PC : kannadasahithyaparishattu
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ 2025-26ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳು ಜ.30,31 ಮತ್ತು ಫೆ.1ರಂದು ಬೆಂಗಳೂರು, ಕಲಬುರಗಿ, ಚಾಮರಾಜನಗರ, ಚಿಕ್ಕಮಗಳೂರು, ದೋಣಿಮಲೈ, ಧಾರವಾಡ, ಬಂಗಾರಪೇಟೆ, ಬಾಗಲಕೋಟೆ, ಬೀದರ್, ಮೂಡುಬಿದರೆ, ಮೈಸೂರು, ಶಿವಮೊಗ್ಗ, ಹಾಸನ ಸೇರಿ ಒಟ್ಟು 13 ಕೇಂದ್ರಗಳಲ್ಲಿ ನಡೆಯಲಿವೆ ಎಂದು ಪರಿಷತ್ನ ವ್ಯವಸ್ಥಾಪಕ ಪಾಶ್ರ್ವನಾಥ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಕನ್ನಡಿಗರಲ್ಲಿ ಅದರಲ್ಲಿಯೂ ಯುವಜನರಲ್ಲಿ ಕನ್ನಡ ಭಾಷೆಯ ಕುರಿತು ಆಸಕ್ತಿ ಬೆಳೆಸುವ ದೃಷ್ಟಿಯಿಂದ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಮಾಡಿದ ವ್ಯವಸ್ಥೆಯೇ ಕನ್ನಡ ಪರೀಕ್ಷೆಗಳಾಗಿದ್ದು, 1940ರಿಂದಲೂ ಪರೀಕ್ಷೆಗಳು ನಿರಂತರವಾಗಿ ನಡೆದು ಕೊಂಡು ಬರುತ್ತಿವೆ.
ಪರೀಕ್ಷೆಯ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಕಳುಹಿಸಲಾಗುವುದು. ಜ.22ರ ನಂತರವೂ ಪ್ರವೇಶ ಪತ್ರ ತಲುಪದಿರುವ ಬಗ್ಗೆ ವಿದ್ಯಾರ್ಥಿಗಳು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ವಿಚಾರಿಸಬೇಕು. ಅಥವಾ ದೂ: 080-26612991, 26623584, 26523867 ಹಾಗೂ ಮೊ: 8618296186ಕ್ಕೆ ಸಂಪರ್ಕಿಸಬಹುದು. ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು www.kasapa.in ವೆಬ್ಸೈಟ್ನಲ್ಲಿಯೂ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.







