‘ಅನ್ನಭಾಗ್ಯ’ ಎರಡು ತಿಂಗಳ ಹಣ ಮಾತ್ರ ಬಾಕಿ : ಕೆ.ಎಚ್.ಮುನಿಯಪ್ಪ

ಬೆಂಗಳೂರು : ಅನ್ನಭಾಗ್ಯ ಯೋಜನೆಯ ಎರಡು ತಿಂಗಳ ಹಣ ಮಾತ್ರ ಪಾವತಿಸುವುದು ಬಾಕಿ ಉಳಿದಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಸೋಮವಾರ ದೊಡ್ಡಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಲ್ಲಿ ಫಲಾನುಭವಿಗಳಿಗೆ 4 ತಿಂಗಳಿಂದ ಹಣ ಸಿಕ್ಕಿಲ್ಲ ಎನ್ನುವ ವಿಷಯ ಹರಿದಾಡುತ್ತಿದೆ. ಇದೆಲ್ಲ ಸುಳ್ಳು, ತಪ್ಪು ಮಾಹಿತಿಯಾಗಿದ್ದು, ಕೇವಲ ಎರಡು ತಿಂಗಳ ಹಣ ಮಾತ್ರ ಪಾವತಿಸುವುದು ಬಾಕಿ ಉಳಿದಿದೆ ಎಂದರು.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ ಫಲಾನುಭವಿಗಳಿಗೆ ಎರಡು ತಿಂಗಳಿಗೊಮ್ಮೆ ಹಣವನ್ನು ಹಾಕಲಾಗುತಿತ್ತು, ಇನ್ನು ಮುಂದೆ ಪ್ರತಿ ತಿಂಗಳು ಅವರ ಖಾತೆಗೆ ಹಣವನ್ನು ಹಾಕಲಾಗುವುದು ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
Next Story





