‘ಕೆಪಿಸಿಎಲ್ ಹುದ್ದೆಗಳ ನೇಮಕಾತಿ’ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು: ಕೆ.ಜೆ.ಜಾರ್ಜ್

ಬೆಂಗಳೂರು : ಕೆಪಿಸಿಎಲ್ ಇಲಾಖೆಯಲ್ಲಿನ ಎ.ಇ., ಜೆ.ಇ. ಕೆಮಿಸ್ಟ್ ಹಾಗೂ ಕೆಮಿಕಲ್ ಸೂಪರ್ ವೈಸರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಹೈಕೋರ್ಟ್ ಆದೇಶದನ್ವಯ ಎಂಬ ಶರತ್ತುಗೊಳಪಟ್ಟು ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಗಮನ ಸೆಳೆದ ಬಿಜೆಪಿ ಸದಸ್ಯ ಶರಣು ಸಲಗರ, 2017ರಲ್ಲಿ ಅಧಿಸೂಚನೆ ಹೊರಡಿಸಿದ್ದ ಕೆಪಿಸಿಎಲ್ ಇಲಾಖೆಯ ಎ.ಇ, ಜೆ.ಇ. ಕೆಮಿಸ್ಟ್ ಹಾಗೂ ಕೆಮಿಕಲ್ ಸೂಪರ್ ವೈಸರ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಐದು ತಿಂಗಳು ಕಳೆದಿದ್ದರೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಿಲ್ಲ. ಕಳೆದ ಎಂಟು ವರ್ಷಗಳಿದ ನೇಮಕಾತಿ ಆದೇಶಕ್ಕಾಗಿ 622 ಜನ ಕಾಯುತ್ತಿದ್ದಾರೆ ಎಂದರು.
Next Story





