Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ತ್ರಿವರ್ಣಧ್ವಜ ಕೆಳಗಿಳಿಸಿ ಭಗವಾ ಧ್ವಜ...

ತ್ರಿವರ್ಣಧ್ವಜ ಕೆಳಗಿಳಿಸಿ ಭಗವಾ ಧ್ವಜ ಏರಿಸುವಂತಹ ಭೀಕರ ಸನ್ನಿವೇಶ ಬರಲಿದೆ : ಕೋಟಿಗಾನಹಳ್ಳಿ ರಾಮಯ್ಯ ಆತಂಕ

ದಲಿತ ಸಾಹಿತ್ಯ ಪರಿಷತ್ ವತಿಯಿಂದ ʼದಲಿತ ಸಾಹಿತ್ಯ ಸಮ್ಮೇಳನʼ

ವಾರ್ತಾಭಾರತಿವಾರ್ತಾಭಾರತಿ22 April 2025 8:31 PM IST
share
ತ್ರಿವರ್ಣಧ್ವಜ ಕೆಳಗಿಳಿಸಿ ಭಗವಾ ಧ್ವಜ ಏರಿಸುವಂತಹ ಭೀಕರ ಸನ್ನಿವೇಶ ಬರಲಿದೆ : ಕೋಟಿಗಾನಹಳ್ಳಿ ರಾಮಯ್ಯ ಆತಂಕ

ಬೆಂಗಳೂರು : ಇಡೀ ಪ್ರಪಂಚವನ್ನು ಪುರೋಹಿತಶಾಹಿ, ಬಂಡವಾಳಶಾಹಿಗಳು ಶೇ.99ರಷ್ಟು ಆಕ್ರಮಣ ಮಾಡಿಕೊಂಡಿದ್ದು, ಇದಕ್ಕೆ ಬಹುದೊಡ್ಡ ಚಾಲಕ ಶಕ್ತಿಯಾಗಿ ಭಾರತದ ವೈದಿಕ ಪುರೋಹಿತಶಾಹಿ ಇದೆ. ಬಹುಶಃ 2047ರ ಹೊತ್ತಿಗೆ ಭಾರತದ ತ್ರಿವರ್ಣಧ್ವಜವನ್ನು ಕೆಳಗಿಳಿಸಿ ಭಗವಾ ಧ್ವಜವನ್ನು ಏರಿಸುವಂತಹ ಭೀಕರ ಸನ್ನಿವೇಶ ಬರಲಿದ್ದು, ದಲಿತರು ಸಹೋದರತ್ವ ಮಾರ್ಗದಲ್ಲಿ ಇದನ್ನು ಎದುರಿಸಬೇಕಾಗಿದೆ ಎಂದು ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿವ್ಯಕ್ತಿಸಿದ್ದಾರೆ.

ಮಂಗಳವಾರ ನಗರದ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ತು, ಬೆಂಗಳೂರು ಘಟಕದ ವತಿಯಿಂದ ನಡೆದ ಜಿಲ್ಲಾಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ರಾಷ್ಟ್ರೀಯತೆಗೆ ಬದಲಾಗಿ ಆರೆಸ್ಸೆಸ್‍ನ ವೈಷ್ಣವ ರಾಷ್ಟ್ರೀಯತೆಯನ್ನು ಹೇರಿಕೆ ಮಾಡಲಾಗುತ್ತಿದೆ. ಇಂದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಬಲಪಂಥೀಯತೆ ತುಂಬಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ಕಾಲದಲ್ಲಿ ‘ದಲಿತ’ ಎಂಬ ಪದ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಜಾಗತೀಕರಣದ ಪ್ರಭಾವದ ನಂತರ ಎಲ್ಲ ದಲಿತ ಚಳವಳಿಗಳು ಒಡೆದಿವೆ. ದಲಿತ ಎಂಬುದು ಎಡ-ಬಲಗಳಾಗಿ ಓಳಾಗಿವೆ. ಇಂದು ದಲಿತ ಸಾಹಿತ್ಯವನ್ನು ಒಂದು ನೋಟವಾಗಿ ನೋಡಲು ಸಾಧ್ಯವಿಲ್ಲದಂತಾಗಿದೆ. ಬಹುತೇಕ ದಕ್ಷಿಣ ಭಾರತದಲ್ಲಿ ದಲಿತ ಪ್ರಜ್ಞೆಯು ಅಧಃಪತನಗೊಂಡಿದೆ. ನಾವೀಗ ದಲಿತ ಸೌಂದರ್ಯ ಮೀಮಾಂಸೆ ಏನೆಂಬುದನ್ನು ಮರುವ್ಯಾಖ್ಯಾನ ಮಾಡಿಕೊಳ್ಳಬೇಕಾದ ತುರ್ತು ಹೆಚ್ಚಾಗಿದೆ ಎಂದು ಕೋಟಿಗಾನಹಳ್ಳಿ ರಾಮಯ್ಯ ಎಚ್ಚರಿಸಿದರು.

ಅಂಬೇಡ್ಕರ್ ಹೇಳಿದ ಬಹುಮುಖ್ಯ ಅಂಶವೆಂದರೆ ಅದು ಸಹೋದರತ್ವ. ದಲಿತರಲ್ಲಿ ಸಹೋದರತ್ವ ಭಾವನೆ ಇಲ್ಲದಿದ್ದರೆ ಸ್ವಾತಂತ್ರ್ಯ, ಸಮಾನತೆ ಸಿಗುವುದಿಲ್ಲ. ಜಾತಿ ಹಾಗೂ ಅದರೊಳಗಿನ ಉಪಜಾತಿಗಳಲ್ಲಿ ಸಹೋದರತ್ವ ಭಾವನೆ ಬಂದಾಗ ಅನ್ಯಾಯಗಳನ್ನು ತಡೆಯಬಹುದು, ಹೋರಾಟವನ್ನು ಜಯಿಸಬಹುದಾಗಿದೆ ಎಂದು ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ಭಾರತದಲ್ಲಿ ದಲಿತರು ಸಹೋದರತ್ವ ಭಾವನೆಯನ್ನು ಉಳಿಸಿಕೊಳ್ಳಲಿಲ್ಲ. ಅಂಬೇಡ್ಕರ್ ಹೇಳಿದ ಸಹೋದರತ್ವ ಪರಿಕಲ್ಪನೆಯನ್ನು ಸರಿಯಾದ ರೀತಿಯನ್ನು ಅಳವಡಿಸಿಕೊಳ್ಳಲಿಲ್ಲ. ಇವತ್ತಿನ ವಿದ್ಯಾವಂತರು, ಮಧ್ಯಮವರ್ಗ ಮತ್ತು ಅಂಬೇಡ್ಕರ್‌ರ ಅನುಯಾಯಿಗಳು ಸೇರಿಕೊಂಡು ಅಂಬೇಡ್ಕರ್ ಹೇಳಿದಂತೆ ನಡೆಯದೆ ಅವರ ನೋವಿಗೆ ಕಾರಣರಾದರು. ಒಂದರ್ಥದಲ್ಲಿ ಅವರನ್ನು ಕೊಂದರು ಎಂದು ಕೋಟಿಗಾನಹಳ್ಳಿ ರಾಮಯ್ಯ ಬೇಸರ ವ್ಯಕ್ತಪಡಿಸಿದರು.

ದಲಿತ ಸಾಹಿತ್ಯಕ್ಕೆ ಹೊಸ ನುಡಿ ಕಟ್ಟಬೇಕು: 1950-70ರ ಕಾಲಘಟ್ಟದ ಸಿದ್ಧಾಂತ, ಚಳವಳಿಗಳನ್ನು ಇವತ್ತಿನ ದಲಿತ ಸಮುದಾಯದ ಯುವ ತಲೆಮಾರು ಸಮಕಾಲೀನಗೊಳಿಸಿಕೊಳ್ಳಬೇಕಾಗಿದೆ. ಹೊಸ ರೀತಿಯಲ್ಲಿ ದಲಿತ ಪ್ರಜ್ಞೆಯನ್ನು ಚಿಂತಿಸಬೇಕಿದೆ. ದಲಿತ ಸಾಹಿತ್ಯದಲ್ಲಿ ಸೈದಾಂತಿಕವಾದ ಪ್ರತಿರೋಧದ ಅಂಶಗಳಿರಬೇಕು. ಆಗ ಮಾತ್ರ ಅದು ದಲಿತ ಸಾಹಿತ್ಯವಾಗಲು ಸಾಧ್ಯ. ಇವತ್ತಿನ ಯುವ ತಲೆಮಾರು ದಲಿತ ಸಾಹಿತ್ಯಕ್ಕೆ ಹೊಸ ನುಡಿಯನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X