ಕೆಪಿಎಸ್‍ಸಿ : ಪರಿಷ್ಕೃತ ಕೀ ಉತ್ತರ ಪ್ರಕಟ

ಬೆಂಗಳೂರು : ಲೋಕಸೇವಾ ಆಯೋಗವು ಅಧಿಸೂಚಿಸಲಾದ ವಿವಿಧ ಹುದ್ದೆಗಳಾದ ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರು, ವಿವಿಧ ಗ್ರೂಪ್-ಸಿ, ವಿವಿಧ ಗ್ರೂಪ್-ಸಿ ಹುದ್ದೆಗಳ ಪರಿಷ್ಕೃತ ಕೀ ಉತ್ತರಗಳನ್ನು ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಪರಿಷ್ಕೃತ ಕೀ-ಉತ್ತರಗಳು ಪ್ರಕಟಿಸಿದ ನಂತರ, ಕೀ ಉತ್ತರ, ಪರಿಷ್ಕೃತ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಯಾವುದೇ ಮನವಿ, ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





