ಮನೆಬಾಗಿಲಿಗೇ ಇ-ಬಿ ಖಾತಾ ಸೌಲಭ್ಯ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಕೃಷ್ಣ ಬೈರೇಗೌಡ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಇ-ಖಾತಾ ಸೇವೆಯನ್ನು ಆರಂಭಿಸಿದ್ದು, ರಾಜ್ಯದ ಎಲ್ಲಾ ಪುರಸಭೆಗಳಲ್ಲೂ ಇ-ಖಾತಾ ಸಹಿತ ಬಿ-ಖಾತಾ ಸೇವೆಯನ್ನು ನೀಡುತ್ತಾ ಇದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇ-ಖಾತಾದಲ್ಲಿ ಎರಡು ವಿಧಾನಗಳಿವೆ. ರೆಗ್ಯುಲರ್ ಆಗಿರುವ ನಿವೇಶನಗಳಿಗೆ ಇ-ಖಾತಾ, ಇರ್ರೆಗ್ಯುಲರ್ ಆಗಿರುವ ನಿವೇಶನಗಳಿಗೆ ಬಿ-ಖಾತಾ ಕೊಡುತ್ತಿದ್ದೇವೆ ಎಂದರು.
ಈ ಹಿಂದೆ ಅಕ್ರಮವಾಗಿ ಮನೆಕಟ್ಟಿದವರಿಗೂ ಕೂಡ ಬಿ-ಖಾತಾ ಕೊಡುವ ತೀರ್ಮಾನವನ್ನು ಸರಕಾರ ಅನುಷ್ಠಾನ ಮಾಡುತ್ತಿದೆ. ಇನ್ನು 15 ದಿನಗಳಲ್ಲಿ ಗ್ರಾಮ ಪಂಚಾಯತಿಗಳಿಗೂ ಇದನ್ನೂ ವಿಸ್ತರಣೆ ಮಾಡಲಿದ್ದು, ಕರ್ನಾಟಕದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಎಲ್ಲಾ ಗ್ರಾಮೀಣ ಪ್ರದೇಶಕ್ಕೂ ಕೂಡ ಇದನ್ನು ವಿಸ್ತರಿಸುವಂತಹ ಕೆಲಸ ಮಾಡುತ್ತಿದ್ದೇವೆ. ಜನರೇ ಮುಂದೆ ಬಂದು ಇ-ಖಾತಾ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ಜನರಿಗೆ ಇ-ಖಾತಾ ಮಾಡಿಸಿಕೊಳ್ಳಲು ಕ್ಯಾಂಪ್, ಮನೆಬಾಗಿಲಿಗೆ ಹೋಗಿ ಅದರ ಬಗ್ಗೆ ಮಾಹಿತಿಯನ್ನು ತಿಳಿಸುವ ಪ್ರಯತ್ನ ಮಾಡಿಸುತ್ತಿದ್ದೇವೆ. ಇದನ್ನು ಸರಕಾರ ಜನರ ಆಸ್ತಿಯ ರಕ್ಷಣೆಗಾಗಿ, ಆಸ್ತಿಯ ಗ್ಯಾರಂಟಿಗಾಗಿ ಮಾಡುತ್ತಾ ಇದೆ. ಜನರ ಕೂಡ ಮುಂದೆ ಬಂದು ಇದನ್ನು ಮಾಡಿಸಿಕೊಳ್ಳಬೇಕು. ಜನರು ಕೂಡ ಇದರ ಅವಕಾಶ ಬಳಸಿಕೊಳ್ಳಬೇಕು ಎಂದರು.
ಇದರಲ್ಲಿ ಇದ್ದತಂಹ ಅನೇಕ ತೊಂದರೆಗಳನ್ನು ಸರಕಾರ ಈಗಾಗಲೇ ನಿವಾರಣೆ ಮಾಡಿದ್ದು, ಬೆಂಗಳೂರಿನಲ್ಲಿ 10 ಲಕ್ಷ ಜನರು ಈಗಾಗಲೇ ಇ-ಖಾತೆಯನ್ನು ಮಾಡಿಸಿದ್ದಾರೆ. ಇ-ಖಾತಾ ಮಾಡಿಸಿಕೊಳ್ಳುವುದರಿಂದ ಜನರ ಆಸ್ತಿಯ ಮಾಲಿಕತ್ವಕ್ಕೆ ಒಂದು ಗ್ಯಾರಂಟಿ ಸಿಗುತ್ತದೆ. ಹಾಗೂ ನಿಮ್ಮ ಆಸ್ತಿಯನ್ನು ಯಾರೂ ಕೂಡ ವಂಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.







