Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ‘ಬೆಂಗಳೂರು ಜಾತ್ರೆ’ | ರಾಜಧಾನಿಯ...

‘ಬೆಂಗಳೂರು ಜಾತ್ರೆ’ | ರಾಜಧಾನಿಯ ಮರುವಿನ್ಯಾಸಕ್ಕೆ ಸಾರ್ವಜನಿಕರಿಗೆ ಆಹ್ವಾನ: ಕೃಷ್ಣ ಬೈರೇಗೌಡ

ವಾರ್ತಾಭಾರತಿವಾರ್ತಾಭಾರತಿ25 Oct 2026 10:39 PM IST
share
‘ಬೆಂಗಳೂರು ಜಾತ್ರೆ’ | ರಾಜಧಾನಿಯ ಮರುವಿನ್ಯಾಸಕ್ಕೆ ಸಾರ್ವಜನಿಕರಿಗೆ ಆಹ್ವಾನ: ಕೃಷ್ಣ ಬೈರೇಗೌಡ

ಬೆಂಗಳೂರು : ‘ಬೆಂಗಳೂರು ಜಾತ್ರೆ’ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಸ್ಥಳಗಳನ್ನು ನವೀನವಾಗಿ ವಿನ್ಯಾಸಗೊಳಿಸಲು ಬೆಂಗಳೂರಿನ ನಾಗರಿಕರನ್ನು ಆಹ್ವಾನಿಸಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ರವಿವಾರ ಈ ಕುರಿತು ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ‘ಬೆಂಗಳೂರು ಜಾತ್ರೆ’ಯ ಅಡಿಯಲ್ಲಿ ಹಮ್ಮಿಕೊಳ್ಳಲಾದ ‘ಬೆಂಗಳೂರು ಡಿಸೈನ್: ಓಪನ್ ಕಾಲ್’ ಕಾರ್ಯಕ್ರಮವು ಬೀದಿ ದೀಪಗಳು, ಬಸ್ ತಂಗುದಾಣಗಳು, ಬೆಂಚ್‍ಗಳು, ರಸ್ತೆ ವಿಭಜಕಗಳು, ಕಸದ ತೊಟ್ಟಿಗಳು, ಅಂಗಡಿ ಮುಂಗಟ್ಟುಗಳು ಮತ್ತು ನೆರೆಹೊರೆಯ ಗುರುತುಗಳನ್ನು ಸುಧಾರಿಸಲು ಪ್ರಾಯೋಗಿಕ ಚಿಂತನೆ, ಆಲೋಚನೆಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕರು ನಗರದ 500 ಮೀಟರ್ ವಿಸ್ತೀರ್ಣದ ಸಂಪೂರ್ಣ ರಸ್ತೆಯ ಸುಧಾರಣೆಗೂ ತಮ್ಮ ಪ್ರಸ್ತಾಪಗಳನ್ನು ಸಲ್ಲಿಸಬಹುದು ಎಂದಿದ್ದಾರೆ.

ಆಯ್ಕೆಯಾದ ಪ್ರಸ್ತಾಪಗಳನ್ನು ಡಿಸೆಂಬರ್ 4ರಿಂದ 13ರವರೆಗೆ ನಡೆಯುವ ‘ಬೆಂಗಳೂರು ಜಾತ್ರೆ’ಯಲ್ಲಿ ಪ್ರದರ್ಶಿಸಲಾಗುತ್ತದೆ. ಈ ಆಹ್ವಾನವು ವಿಶೇಷವಾಗಿ ಬೆಂಗಳೂರಿನ ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ನಗರಕ್ಕಾಗಿ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಅವಕಾಶವಾಗಿದೆ. ಉತ್ತಮ ಆಲೋಚನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿದ ತೀರ್ಪುಗಾರರ ಮಂಡಳಿಯು ಮೌಲ್ಯಮಾಪನ ಮಾಡುತ್ತದೆ. ಆಯ್ಕೆಯಾದ ವಿನ್ಯಾಸಗಳನ್ನು ತಾಂತ್ರಿಕ, ಹಣಕಾಸು ಮತ್ತು ಕಾರ್ಯಾಚರಣೆಯ ಸಾಧ್ಯತೆಗಳನ್ನು ಆಧರಿಸಿ ಅನುಷ್ಠಾನಕ್ಕಾಗಿ ಸಂಬಂಧಪಟ್ಟ ನಗರ ಪಾಲಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

‘ಬೆಂಗಳೂರು ಡಿಸೈನ್: ಓಪನ್ ಕಾಲ್' ಕಾರ್ಯಕ್ರಮದಡಿಯಲ್ಲಿ ನಗರದಲ್ಲಿ ವಾಸಿಸುವ, ಕೆಲಸ ಮಾಡುವ ಮತ್ತು ನಗರವನ್ನು ಅರ್ಥಮಾಡಿಕೊಂಡ ಜನರಿಗೆ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಹೊಸ ದೃಷ್ಟಿಕೋನದಿಂದ ನೋಡಲು ಹಾಗೂ ಪ್ರಾಯೋಗಿಕ, ಕಡಿಮೆ ವೆಚ್ಚದ ಮತ್ತು ಎಲ್ಲರನ್ನೂ ಒಳಗೊಳ್ಳುವ ಪರಿಹಾರಗಳನ್ನು ನೀಡಲು ಆಹ್ವಾನಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ಇದು ನಗರದ ಕೊರತೆಗಳನ್ನು ಬೆಟ್ಟು ಮಾಡಿ ತೋರಿಸುವುದನ್ನು ಬಿಟ್ಟು, ಸುಧಾರಣೆಯ ಹಾದಿಯಲ್ಲಿ ಯೋಚಿಸಲು ನೀಡಲಾದ ಉತ್ತಮ ಅವಕಾಶವಾಗಿದೆ. ವಿದ್ಯಾರ್ಥಿಯೊಬ್ಬರು ಉತ್ತಮ ಬಸ್ ತಂಗುದಾಣದ ವಿನ್ಯಾಸ ಮಾಡುವುದು, ವಾಸ್ತುಶಿಲ್ಪಿಯೊಬ್ಬರು ಪಾದಚಾರಿ ಸ್ನೇಹಿ ರಸ್ತೆಯನ್ನು ಮರುರೂಪಿಸುವುದು, ಕಲಾವಿದರೊಬ್ಬರು ಸ್ಥಳೀಯ ಸಂಸ್ಕೃ ತಿಯ ಐಡೆಂಟಿಟಿ ನೀಡುವುದು ಅಥವಾ ಹೊಸ ವಿನ್ಯಾಸಕರು ಸಾರ್ವಜನಿಕ ಸ್ಥಳಗಳನ್ನು ಇನ್ನಷ್ಟು ಪ್ರವೇಶಿಸಬಹುದಾಗಿ ಮಾಡುವುದು- ಇವೆಲ್ಲವೂ ಈ ಆಹ್ವಾನದ ಆಶಯವಾಗಿದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದ್ದಾರೆ.

ನಗರವನ್ನು ಕೇವಲ ಪ್ರಮುಖ ಮೂಲಸೌಕರ್ಯಗಳಿಂದ ಮಾತ್ರವಲ್ಲ, ಜನರು ಬಳಸುವ ದೈನಂದಿನ ಸ್ಥಳಗಳ ಮೂಲಕವೂ ಅನುಭವಿಸಲಾಗುತ್ತದೆ. ಬೆಂಗಳೂರನ್ನು ಹೆಚ್ಚು ಸುಲಭವಾಗಿ ತಲುಪುವ, ಆಕರ್ಷಕ ಮತ್ತು ವಾಸಯೋಗ್ಯವಾಗಿಸುವ ಆಲೋಚನೆಗಳನ್ನು ನಾಗರಿಕರು ತರಬೇಕೆಂದು ನಾವು ಬಯಸುತ್ತೇವೆ. ಈ ಉದ್ಯಮವು ಜನರ ಸೃಜನಶೀಲತೆಯನ್ನು ನಗರದ ಅಗತ್ಯಗಳೊಂದಿಗೆ ಜೋಡಿಸುವ ಒಂದು ಅವಕಾಶವಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಿಗರಿಗೆ ಇವು ಕೇವಲ ತಾತ್ವಿಕ ವಿನ್ಯಾಸದ ಪ್ರಶ್ನೆಗಳಲ್ಲ. ಮಿಲಿಯನ್‍ಗಟ್ಟಲೆ ಜನರು ದೈನಂದಿನ ಜೀವನದಲ್ಲಿ ಜನನಿಬಿಡ ರಸ್ತೆಗಳಲ್ಲಿ ಸಂಚರಿಸುವ, ಸಾರ್ವಜನಿಕ ಸಾರಿಗೆಗಾಗಿ ಕಾಯುವ ಮತ್ತು ನೆರೆಹೊರೆಯಲ್ಲಿ ಓಡಾಡುವ ದೈನಂದಿನ ಅನುಭವಗಳಾಗಿವೆ. ಆದಾಗ್ಯೂ, ದೊಡ್ಡ ಮೂಲಸೌಕರ್ಯ ಯೋಜನೆಗಳಿಗೆ ಹೋಲಿಸಿದರೆ ಈ ಸಾಧಾರಣ ವಾತಾವರಣವು ಕಡಿಮೆ ಗಮನ ಸೆಳೆಯುತ್ತದೆ. ಆದರೆ, ಯೋಜನಾಬದ್ಧವಾಗಿ ವಿನ್ಯಾಸಗೊಳಿಸಲಾದ ಬಸ್ ತಂಗುದಾಣ, ಸುರಕ್ಷಿತ ಬೀದಿಗಳು ಅಥವಾ ಸಾರ್ವಜನಿಕ ಸ್ಥಳಗಳು ಜನರು ನಗರವನ್ನು ಅನುಭವಿಸುವ ರೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ತರಬಲ್ಲವು ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಈ ಮುಕ್ತ ಆಹ್ವಾನವು ಕೇವಲ ಸುಂದರವಾದ ಚಿತ್ರಗಳು ಅಥವಾ ಬೃಹತ್ ಕಲ್ಪನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ನಗರದ ನೈಜ ಪರಿಸ್ಥಿತಿಗೆ ಸ್ಪಂದಿಸುವ ವಿನ್ಯಾಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರಸ್ತಾಪಗಳು ಪ್ರಾಯೋಗಿಕವಾಗಿ, ಕಡಿಮೆ ವೆಚ್ಚದಲ್ಲಿ, ಸುಲಭವಾಗಿ ನಿರ್ವಹಿಸಬಹುದಾದಂತೆ ಮತ್ತು ನಾಗರಿಕ ಆಡಳಿತ ಪ್ರಕ್ರಿಯೆಗೆ ಸೂಕ್ತವಾಗಿರಬೇಕು. ಉತ್ತಮ ವಿನ್ಯಾಸವು ಕೇವಲ ನೋಡಲು ಸುಂದರವಾಗಿದ್ದರೆ ಸಾಲದು. ಅದು ರಸ್ತೆಯಲ್ಲಿ ಕಾರ್ಯಸಾಧ್ಯವಾಗಿರಬೇಕು, ನಿರ್ವಹಿಸಲು ಕೈಗೆಟುಕುವಂತಿರಬೇಕು, ಜನರ ದೈನಂದಿನ ಅನುಭವವನ್ನು ಸುಧಾರಿಸಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿನ್ಯಾಸ ಸಲ್ಲಿಕೆಯ ವಿವರ:

* ಕೊನೆಯ ದಿನಾಂಕ: ನವೆಂಬರ್ 15

* ಇಮೇಲ್ ವಿಳಾಸ: support@bengalurujatre.in

* ಪ್ರದರ್ಶನ: ಡಿಸೆಂಬರ್ 4ರಿಂದ 13ರವರೆಗೆ (ಬೆಂಗಳೂರು ಜಾತ್ರೆಯ ಸಂದರ್ಭದಲ್ಲಿ)

Tags

Krishna Byre Gowda
share
ವಾರ್ತಾಭಾರತಿ
ವಾರ್ತಾಭಾರತಿ
Next Story
X