Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಬಾನು ಮುಷ್ತಾಕ್ ಮುಸ್ಲಿಂ ಸಮಾಜದ...

ಬಾನು ಮುಷ್ತಾಕ್ ಮುಸ್ಲಿಂ ಸಮಾಜದ ಮಹಿಳೆಯರಿಗೆ ಜಾಗತಿಕವಾಗಿ ಧ್ವನಿ ನೀಡಿದ್ದಾರೆ : ಎಲ್.ಕೆ.ಅತೀಕ್

ವಾರ್ತಾಭಾರತಿವಾರ್ತಾಭಾರತಿ2 Jun 2025 11:36 PM IST
share
ಬಾನು ಮುಷ್ತಾಕ್ ಮುಸ್ಲಿಂ ಸಮಾಜದ ಮಹಿಳೆಯರಿಗೆ ಜಾಗತಿಕವಾಗಿ ಧ್ವನಿ ನೀಡಿದ್ದಾರೆ : ಎಲ್.ಕೆ.ಅತೀಕ್

ಬೆಂಗಳೂರು : ಕನ್ನಡ ಸಂಸ್ಕೃತಿ ಇಲಾಖೆ ವಿಧಾನ ಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ "ಬೂಕರ್‌ ಇಂಟರ್ ನ್ಯಾಷನಲ್" ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಅಭಿನಂದನಾ ನುಡಿಗಳನ್ನಾಡಿದರು.

ಅದರ ಪೂರ್ಣ ಪಾಠ ಇಲ್ಲಿದೆ :

ಇದೊಂದು ಚಾರಿತ್ರಿಕ ಕಾರ್ಯಕ್ರಮ. ಇಂಥಾ ಮಹತ್ವದ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ: ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪಡೆದ ಮೊದಲ ಕನ್ನಡತಿ, ಬರಹಗಾರ್ತಿ ಶ್ರೀಮತಿ ಬಾನು ಮುಷ್ತಾಕ್ ಅವರನ್ನು ಸನ್ಮಾನಿಸಲು ಮತ್ತು ಧನ್ಯವಾದ ಹೇಳಲು ನಾವು ಇಲ್ಲಿ ಸೇರಿದ್ದೇವೆ. ಅವರನ್ನು ಸನ್ಮಾನಿಸುವ ಮೂಲಕ ನಾವು ಕನ್ನಡಿಗರು ನಮ್ಮನ್ನು ನಾವೆ ಗೌರವಿಸಿಕೊಳ್ಳುತ್ತಿದ್ದೇವೆ ಮತ್ತು ಸುಮಾರು 1500 ವರ್ಷಗಳಷ್ಟು ಹಳೆಯದಾದ ಭಾಷೆಯನ್ನು ಗೌರವಿಸುತ್ತಿದ್ದೇವೆ.

ಕದಂಬರ ಕಾಲದ ಮೊದಲ ಕನ್ನಡ ಶಿಲಾ ಶಾಸನ, ಕ್ರಿ.ಶ. 450ರಲ್ಲಿ, ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ಕಂಡುಬಂದಿದೆ ಮತ್ತು ಬಾನು ಮುಷ್ತಾಕ್ ಅವರು ಇದೇ ಜಿಲ್ಲೆಯವರು ಎನ್ನುವುದನ್ನು ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ.

ಬಾನು ಮುಷ್ತಾಕ್ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಎರಡು ಬೂಕರ್ ಪ್ರಶಸ್ತಿಗಳಿದ್ದು, ಒಂದು ಇಂಗ್ಲೀಷ್ ಕೃತಿಗಳಿಗೆ ಮತ್ತೊಂದು ಇಂಗ್ಲೀಷ್ ಗೆ ಅನುವಾದಗೊಂಡ ಕೃತಿಗಳಿಗೆ ನೀಡಲಾಗುತ್ತದೆ. ಇದು ಇಂಗ್ಲೀಷೇತರ ಬರಹವಾಗಿದ್ದು, ಇಂಗ್ಲಿಷ್‌ಗೆ ಅನುವಾದಗೊಂಡಿದೆ.

ಬಾನು ಮುಷ್ತಾಕ್‌ ಅವರಿಗೆ ಬೂಕರ್‌ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಬಂದಿರುವುದರಿಂದ ಅವರು ಭಾಗ್ಯವಂತರಲ್ಲ. ಕನ್ನಡ ಸಾಹಿತ್ಯ ಪರಂಪರೆ ಮತ್ತು ನಾವು ಭಾಗ್ಯವಂತರು. ಬಾನು ಮುಷ್ತಾಕ್‌ ಅವರಿಗೆ ಬಂದಿರುವ ಈ ಪ್ರಶಸ್ತಿ ಇವತ್ತಿನ ಜಾಗತಿಕ ಸಂದರ್ಭದಲ್ಲಿ ಹಾಗೂ ಭಾರತೀಯ ಮತ್ತು ಕರ್ನಾಟಕದ ಪರಿಸ್ಥಿತಿಯಲ್ಲಿ SOCIO-POLITICAL ಮತ್ತು SOCIO-CULTURAL ಮಹತ್ವವನ್ನು ಹೊಂದಿದೆ.

ಬಾನು ಮುಷ್ತಾಕ್‌ ಅವರು ವಿಶ್ವ ವಿದ್ಯಾಲಯದ ವೇದಿಕೆಗಳಿಗೆ ಬರೆಯುತ್ತಾ ಕೇವಲ ಬೌದ್ಧಿಕವಲಯದ ಓದುಗರನ್ನು ಮೆಚ್ಚಿಸಿದವರಲ್ಲ. ಭೂಮಿಯ ಅರ್ಧದಷ್ಟಿರುವ ಮಹಿಳಾ ಕುಲದ ನೋವನ್ನು ತಮ್ಮ ನೋವನ್ನಾಗಿ ಮಾಡಿಕೊಂಡು, ತಮ್ಮ ವೈಯುಕ್ತಿಕ ಬದುಕಿನ ಅನುಭವ ಮತ್ತು ನೋವನ್ನು ತಾವು ಬದುಕುತ್ತಿರುವ ಸಮಾಜದ ಮತ್ತು ಸಂದರ್ಭದ ನೋವಿನ ಕತೆಗಳನ್ನಾಗಿ ದಾಖಲಿಸಿದ್ದಾರೆ.

ಧಾರ್ಮಿಕ ರಾಜಕಾರಣ ಇಡೀ ಜಗತ್ತನ್ನು ತನ್ನ ಮೂಗಿನ ನೇರಕ್ಕೆ ವಿಭಜಿಸಿ ಮರು ಜೋಡಣೆ ಮಾಡುತ್ತಿರುವ ಕಾಲಘಟ್ಟದಲ್ಲಿ ಸಾಹಿತ್ಯದ ಹೆಸರಿನಲ್ಲಿ ಬಂದಿರುವ ಬೂಕರ್‌ ಪ್ರಶಸ್ತಿ ಧರ್ಮ ರಾಜಕಾರಣಕ್ಕೆ ಮತ್ತು ಮೂಲಭೂತವಾದಿ ಶಕ್ತಿಗಳಿಗೆ ಕೊಟ್ಟಿರುವ ಸ್ಪಷ್ಟ ಸಂದೇಶವಾಗಿದೆ.

ಎಲ್ಲಾ ರೀತಿಯ ಧಾರ್ಮಿಕ ದರ್ಪಗಳನ್ನು ಎದುರಿಸಿ ನಿಂತಿರುವ ಭಾನು ಅವರ ಬರವಣಿಗೆ ಹಾಗೂ ಬರವಣಿಗೆಗೆ ಸಿಕ್ಕಿರುವ ಮನ್ನಣೆಯು, ಅತ್ಯುನ್ನತ ನಾಗರಿಕ ಮೌಲ್ಯಕ್ಕೆ ಸಿಕ್ಕಿರುವ ಮನ್ನಣೆಯೂ ಆಗಿದೆ.

ಬಾನು ಅವರ ಬೂಕರ್‌ ಪ್ರಶಸ್ತಿ ಕನ್ನಡ ನೆಲದಲ್ಲಿ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಆರೋಗ್ಯಪೂರ್ಣವಾದ ಸಹಬಾಳ್ವೆಯ ಆಶಯಕ್ಕೆ ಸಿಕ್ಕಿರುವ ಮನ್ನಣೆಯಾದರೆ, ಜಾಗತಿಕ ಮಟ್ಟದಲ್ಲಿ ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ಕೊಟ್ಟಿರುವ ಮನ್ನಣೆಯೂ ಆಗಿದೆ ಎಂದು ಹೇಳಬಹುದು.

ಪತ್ರಕರ್ತೆಯಾಗಿ, ವಕೀಲರಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಮಹಿಳೆಯಾಗಿ, ಮುಸ್ಲಿಂ ಮಹಿಳೆಯಾಗಿ ಬಾನು ಅವರು ಬದುಕಿನ ಪ್ರತಿಹೆಜ್ಜೆಯನ್ನೂ ಪ್ರಶ್ನೆಸುವ ಮತ್ತು ಪ್ರತಿರೋಧದ ಸಂಘರ್ಷದಲ್ಲೇ ರೂಪುಗೊಂಡವರು. ಸಮಾಜದ ಎಲ್ಲಾ ರೀತಿಯ ಯಜಮಾನ್ಯತೆಯನ್ನೂ ಎದುರಿಸಿ ನಿಂತಿರುವ CRITICAL INSIDER.

ಬಾನು ಅವರು ನಾಗರಿಕತೆಯ ಮೂಲ ಆಶಯವಾದ ಆರೋಗ್ಯಪೂರ್ಣವಾದ ಬದುಕನ್ನು ಕಟ್ಟಲು ಪ್ರಯತ್ನಿಸುವ ಲೇಖಕಿ. ಬೂಕರ್‌ ಪ್ರಶಸ್ತಿ ಒದಗಿಸಿಕೊಟ್ಟ ಎದೆಯ ಹಣತೆ ಕಥಾ ಸಂಕಲನದಲ್ಲಿ ‘ನನ್ನ ಕಥೆಯಲ್ಲಿ ಹೆಣ್ಣೇ ವಿರಾಜಮಾನಳಾಗಿದ್ದಾಳೆ’ ಎಂದಿದ್ದಾರೆ. ಹೆಣ್ಣಿನ ಮೂಲಕ ಬಾನು ಅವರು ನೋಡುತ್ತಿರುವ ಲೋಕ ಹೆಣ್ಣಿನ ಶೋಷಣೆಗಳ, ದಬ್ಬಾಳಿಕೆಗಳ ನೋವು ವಿಷಾದಗಳ ಲೋಕವಾಗಿದೆ.

ತನ್ನ ಮತ್ತು ಹೆಣ್ಣಿನ ಈ ಹೊತ್ತಿನ ನೋವಿಗೆ ಗಂಡಾಳಿಕೆಯ ಯಜಮಾನ್ಯ ಸಂಸ್ಕೃತಿಯನ್ನು ಮತ್ತು ಗಂಡಾಳಿಕೆಯ ದೇವರನ್ನೂ ಬಾನು ಅವರ ಕಥೆಗಳು ಕಟಕಟೆಯಲ್ಲಿ ನಿಲ್ಲಿಸುತ್ತವೆ.

‘ಒಮ್ಮೆ ಹೆಣ್ಣಾಗು ಪ್ರಭುವೆ’, “ದೇವರು ಮತ್ತು ಅಪಘಾತ”, ‘ಇದ್ದತ್’ ಮುಂತಾದ ಕಥೆಗಳಲ್ಲಿ ಹಸಿವನ್ನು ಅಂಗೈಯಲ್ಲಿ ಹಿಡಿದು ದೇವರನ್ನು ಪ್ರಶ್ನಿಸುವ ವಕೀಲರಾಗಿ ಕರುಳಿನ ಕೂಗನ್ನು ಗೆಲ್ಲಿಸುವ ಬಾನು ಅವರು ಹೆಣ್ಣಿನ ಶೋಷಣೆಯನ್ನೂ, ಹೆಣ್ಣಿನ ಮಿತಿಗಳನ್ನು ತೋರಿಸಲೂ ಹಿಂದೆ ಮುಂದೆ ನೋಡುವುದಿಲ್ಲ. 'ಪಾರಿವಾಳಗಳ ರೆಕ್ಕೆಗಳ ಹಾಡು' ಕಥೆಯಲ್ಲಿ ಉದ್ಯೋಗಸ್ಥ ಮಹಿಳೆ ಹುಡುಗಿಯೊಬ್ಬಳನ್ನು ಶೋಷಿಸುವುದನ್ನೂ ಪ್ರಶ್ನಿಸಿದ್ದಾರೆ.

ಧರ್ಮ, ಸಂಪ್ರದಾಯ ಮತ್ತು ಗಂಡಾಳಿಕೆ ಸೃಷ್ಟಿಸುವ ಗೌರವದ ಕಲ್ಪನೆಗಳ ಹೊರೆಯನ್ನು ಹೊತ್ತ ಮುಸ್ಲಿಂ ಮಹಿಳೆಯರ ಯಾತನೆಗಳು ಬಾನು ಕಥೆಗಳಲ್ಲಿವೆ. ಕನಸು ಕಾಣಲು, ವಿಭಿನ್ನವಾಗಿ ಯೋಚಿಸಲು ಧೈರ್ಯ ಮಾಡುವ ಮತ್ತು ತಮ್ಮ ಆಲೋಚನೆಗಳು ಮತ್ತು ಕನಸುಗಳ ಮೇಲೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುವ ಮಹಿಳೆಯರನ್ನು ಬಾನು ಕಥೆಯಾಗಿಸಿದ್ದಾರೆ.

ನಾಲ್ಕು ಗೋಡೆಗಳ ಒಳಗೆ ಕುಳಿತು ಕತೆಗಳನ್ನು ಸೃಷ್ಟಿಸದ ಬಾನು ಅವರು ಸಾಮಾಜಿಕ ಕಾರ್ಯಕರ್ತೆಯಾಗಿ ಸಮಾಜದೊಂದಿಗಿನ ಮುಖಾಮುಖಿ ಅನುಭವಗಳಿಂದ ಮತ್ತು ಅವರು ಬಡ ಕಕ್ಷಿದಾರರೊಂದಿಗೆ ವ್ಯವಹರಿಸುವ ಅನುಭವಗಳಿಂದ ಕಥೆಗಳನ್ನು ಸೃಜಿಸಿದ್ದಾರೆ. ಈ ಕಥೆಗಳು ಜಾಗತಿಕ ಮಹತ್ವವನ್ನೂ ಹೊಂದಿರುವ ಕಥೆಗಳು. ಇವು ಪ್ರಪಂಚದಾದ್ಯಂತ ಎಲ್ಲಾ ಸಂಸ್ಕೃತಿಗಳು ಮತ್ತು ಧರ್ಮಗಳ ಮಹಿಳೆಯರೂ ಎದುರಿಸುತ್ತಿರುವ ಸವಾಲುಗಳೇ ಆಗಿವೆ.

ಮಹಿಳೆಯರು ಸಂಸ್ಕೃತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಸಮಾನತೆಯ ಹೊರೆಯನ್ನು ಹೊತ್ತಿದ್ದಾರೆ. ಗಂಡಾಳಿಕೆ ಸೃಷ್ಟಿಸಿದ ರೂಢಿ, ಸಂಪ್ರದಾಯಗಳ ಜಗತ್ತಿನಲ್ಲಿ ಅವರನ್ನು ಬದುಕುವಂತೆ ಮಾಡಲಾಗುತ್ತದೆ. ಮತ್ತು ಸಣ್ಣ ಭಿನ್ನಾಭಿಪ್ರಾಯ ಅಥವಾ ಸಣ್ಣ ಪ್ರತಿರೋಧವನ್ನೂ ಬಲವಂತವಾಗಿ ಧರ್ಮ ಮತ್ತು ಸಂಪ್ರದಾಯದ ಬೆತ್ತದಿಂದ ನಿಗ್ರಹಿಸಲಾಗುತ್ತದೆ. "ಎದೆಯ ಹಣತೆ" ಕಥೆಯಲ್ಲಿ, ಮೆಹ್ರುನ್ ತನ್ನ ಗಂಡನಿಗೆ ಸಣ್ಣ ವಯಸ್ಸಿನ ಮಹಿಳೆಯೊಂದಿಗೆ ಇರುವ ಸಂಬಂಧವನ್ನು ಮತ್ತು ಈ ಅವಮಾನವನ್ನು ಸಹಿಸದಿರಲು ನಿರ್ಧರಿಸಿ ಚಿಕ್ಕಮಗಳೂರಿನಲ್ಲಿರುವ ತನ್ನ ಗಂಡನ ಮನೆಯಿಂದ ಹೊರಟು ಹಾಸನಕ್ಕೆ, ತನ್ನ ತಂದೆಯ ಮನೆ ಸೇರುತ್ತಾಳೆ. ತನ್ನ ತವರಿನಲ್ಲಾದರೂ ಸಹಾನುಭೂತಿ ಸಿಗಬಹುದು ಎನ್ನುವ ನಿರೀಕ್ಷೆ ಆಕೆಗಿತ್ತು. ಆದರೆ ಈ ನಿರೀಕ್ಷೆ ಸುಳ್ಳಾಗಿ ಇದಕ್ಕೆ ವಿರುದ್ಧವಾದ ಸ್ವಾಗತ ತವರು ಮನೆಯಲ್ಲಿ ಪಡೆಯುತ್ತಾಳೆ. ಅವಳನ್ನು ತಕ್ಷಣವೇ ಪುನಃ ತನ್ನ ಗಂಡನ ಮನೆಗೆ ಕರೆದೊಯ್ಯಲಾಗುತ್ತದೆ. ಅವಳ ತಂದೆ, ಸಹೋದರರು, ಸಮಾಜ ಮತ್ತು ಸಂಪ್ರದಾಯ ತಂದೆ ಮತ್ತು ಸಹೋದರರನ್ನು ಕಟ್ಟಿಹಾಕಿದೆ. ಅವರಿಗೆ ಇದು ಮರ್ಯಾದೆಯ ಪ್ರಶ್ನೆ. ಒಬ್ಬ ಸಹೋದರ ಹೇಳುತ್ತಾನೆ, ನೀನು ಗಂಡನ ಮನೆ ಬಿಟ್ಟುಬಂದು ನಮ್ಮ ಮನೆಯ ಮರ್ಯಾದೆ ತೆಗೆಯುವ ಮೊದಲು ಬೆಂಕಿ ಹಚ್ಚಿಕೊಂಡು ಸಾಯಬಾರದಾ ಎಂದು ಕೇಳುತ್ತಾನೆ.

ಬಾನು ಮುಷ್ತಾಕ್ ಮುಸ್ಲಿಂ ಸಮಾಜದ ಮೆಹ್ರುನ್‌ಗಳು, ಹಸಿನಾಗಳು ಮತ್ತು ಜಮೀಲಾಗಳಿಗೆ ಜಾಗತಿಕವಾಗಿ ಧ್ವನಿ ನೀಡಿದ್ದಾರೆ. ಜೊತೆಗೆ ಮಹಿಳೆಯರ ಈ ದುಃಸ್ಥಿತಿ ಮುಸ್ಲಿಂ ಮಹಿಳೆಯರಿಗೆ ಮಾತ್ರ ಸೀಮಿತವಾದದ್ದಲ್ಲ, ಹಿಂದೂಗಳು, ಕ್ರಿಶ್ಚಿಯನ್ನರು, ಬುಡಕಟ್ಟು ಸಮುದಾಯಗಳಲ್ಲೂ ಇಂತಹ ಕಥೆಗಳನ್ನು ಕಾಣಬಹುದು. ಜಮಾತ್‌ಗಳ ತೀರ್ಪುಗಳು, ಉತ್ತರದ ಜಾತಿ ಪಂಚಾಯತ್‌ ಗಳು, ಖಾಪ್ ಪಂಚಾಯತ್‌ ಗಳಲ್ಲಿ ನೀಡುವ ತೀರ್ಪುಗಳು ಮತ್ತು ಚರ್ಚ್‌ಗಳಲ್ಲಿ ಬರುವ ತೀರ್ಪುಗಳಿಗಿಂತ ಹೆಚ್ಚು ಭಿನ್ನವಾಗಿಲ್ಲ.

ಸಾಹಿತ್ಯವು ಕೆಲವರು ಬರೆಯುವ ಮತ್ತು ಇತರರು ತಮ್ಮ ಬಿಡುವಿನ ವೇಳೆಯಲ್ಲಿ ಓದುವ ಕಥೆಗಳಲ್ಲ. ಸಾಹಿತ್ಯವು ಸಂಘರ್ಷ ಮತ್ತು ಪ್ರತಿರೋಧದ ಕ್ರಿಯೆ. ಸಾಹಿತ್ಯವು ಭಿನ್ನಾಭಿಪ್ರಾಯ ಹಾಗೂ ಸತ್ಯದ ಹುಡುಕಾಟವಾಗಿದೆ. ಜೆಕ್ ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಮಿಲನ್ ಕುಂದೇರಾ ಹೇಳಿದಂತೆ “ಲೇಖಕನಾಗುವುದು ಎಂದರೆ ಸತ್ಯವನ್ನು ಬೋಧಿಸುವುದು ಎಂದಲ್ಲ, ಸತ್ಯವನ್ನು ಕಂಡುಕೊಳ್ಳುವುದು ಎಂದರ್ಥ.”

ನನಗೆ 2002 ರಿಂದ ಬಾನು ಮುಷ್ತಾಕ್ ಅವರ ಪರಿಚಯವಿದೆ. ನಾನು ಹಾಸನದಲ್ಲಿ ಜಿಲ್ಲಾಧಿಕಾರಿ ಆಗಿದ್ದಾಗ, ಬಾನು ಮುಷ್ತಾಕ್ ಅವರು ವಕೀಲರಾಗಿ ಡಿಸಿ ನ್ಯಾಯಾಲಯದಲ್ಲಿ ನನ್ನ ಮುಂದೆ ಹಾಜರಾಗುತ್ತಿದ್ದರು. ನಾವು FAMILY FRIENDS. ನಾವು ಹವಲು ಬಾರಿ ಬಾನು ಅವರ ಮನೆಗೆ ಭೋಜನಕ್ಕೆ ಊಟಕ್ಕೆ ಹೋಗಿದ್ದೇವೆ. ಬಾನು ಮತ್ತು ಮುಷ್ತಾಕ್ ಅವರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಬಾನು ಅವರು ಸ್ವತಂತ್ರ ಚಿಂತಕರು. ಮಹಿಳೆಯರ ಹಿತಾಸಕ್ತಿಗಳಿಗಾಗಿ ಸಾಮಾಜಿಕ ಕಾರ್ಯಕರ್ತೆಯಾಗಿ ಬಾನು ಮುಷ್ತಾಕ್ ಅವರು ನಡೆಸಿದ ಹೋರಾಟಗಳನ್ನು ನಾನು ಯಾವಾಗಲೂ ಗೌರವಿಸುತ್ತೇನೆ.

ನಮ್ಮ ಕನ್ನಡ ಭಾಷೆಗೆ, ಕನ್ನಡ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಗೆ ಬೂಕರ್‌ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಮೂಲಕ ಭಾರತಕ್ಕೆ ಜಾಗತಿಕ ಮನ್ನಣೆಯನ್ನು ತಂದಿದ್ದಕ್ಕಾಗಿ ಬಾನು ಮುಷ್ತಾಕ್ ಮತ್ತು ಅವರ ಅನುವಾದಕರನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ.

ಜೈ ಕರ್ನಾಟಕ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X