ಲೋಕಸಭಾ ಚುನಾವಣೆ: 11 ಗಂಟೆ ವೇಳೆ ರಾಜ್ಯದಲ್ಲಿ 22.34 ಶೇ. ಮತದಾನ
ಬೆಂಗಳೂರು, ಎ.26: ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನ ಸಾಧಾರಣವಾಗಿದೆ. 11 ಗಂಟೆ ವೇಳೆ 22.34 ಶೇ. ಹಕ್ಕು ಚಲಾವಣೆಯಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 29.03 ಶೇ. ಮತದಾನವಾಗಿದ್ದರೆ, ಹಾಸನ 22.03 ಶೇ., ದಕ್ಷಿಣ ಕನ್ನಡ 30.98 ಶೇ., ಚಿತ್ರದುರ್ಗ- 21.75 ಶೇ., ತುಮಕೂರು 23.32 ಶೇ., ಮಂಡ್ಯ 21.24 ಶೇ., ಮೈಸೂರು 25.09, ಚಾಮರಾಜನಗರ- 22.81 ಶೇ., ಬೆಂಗಳೂರು ಗ್ರಾಮಾಂತರ-20.35 ಶೇ., ಬೆಂಗಳೂರು ಉತ್ತರ-19.78 ಶೇ., ಬೆಂಗಳೂರು ಸೆಂಟ್ರಲ್-19.21 ಶೇ., ಬೆಂಗಳೂರು ದಕ್ಷಿಣ-19.81.ಶೇ., ಚಿಕ್ಕಬಳ್ಳಾಪುರ 21.92 ಶೇ. ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 20.76 ಶೇ. ಮತದಾನವಾಗಿದೆ.
Next Story