ಕೊಪ್ಪಳ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಮನೆ-ಕಚೇರಿ ಮೇಲೆ ಲೊಕಾಯುಕ್ತ ದಾಳಿ

ಕೊಪ್ಪಳ: ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತರು ದಾಳಿ ನಡೆಸಿ, ವಿವಿಧ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರ ನಿರ್ದೇಶಕ ಶೇಕು ಚೌಹಾಣ್ ಅವರ ಅಭಿಷೇಕ್ ಬಡಾವಣೆ ಬಳಿ ಇರುವ ಮನೆ ಮತ್ತು ಭಾಗ್ಯ ನಗರದ ಕೀರ್ತಿ ನಗರದ ಮನೆ ಸೇರಿದಂತೆ ನಗರಸಭೆ ಮುಂದೆ ಇರುವ ಅವರ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಆದಾಯ ಮೀರಿ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಇನ್ನು ಇವರ ಹುಬ್ಬಳಿಯಲ್ಲಿ ಇರುವ ಮನೆ ಮೇಲೂ ದಾಳಿಯಾಗಿದೆ ಎಂದು ತಿಳಿದುಬಂದಿದೆ.
Next Story





