ನ.14ರಿಂದ ಗುಲಾಬಿ ಮಾರ್ಗದಲ್ಲಿ ‘ಮೆಟ್ರೋ ಸೇವೆ ಆರಂಭ’

ಬೆಂಗಳೂರು : ಕಾಳೇನ ಅಗ್ರಹಾರ ಮತ್ತು ಎಸ್.ಜಿ.ಪಾಳ್ಯ (ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣಗಳ ನಡುವಿನ ಗುಲಾಬಿ ಮಾರ್ಗದಲ್ಲಿ ನಾಳೆಯಿಂದ (ನ.14) ನಮ್ಮ ಮೆಟ್ರೋ ರೈಲು ಸೇವೆಗಳು ಆರಂಭವಾಗಲಿವೆ.
ಪ್ರತಿ ಸೋಮವಾರದಂದು, ಕಾಳೇನ ಅಗ್ರಹಾರದಿಂದ ಬೆಳಗ್ಗೆ 4:55ರಿಂದ ಹಾಗೂ ಎಸ್.ಜಿ.ಪಾಳ್ಯ (ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 5ಗಂಟೆಗೆ ನಮ್ಮ ಮೆಟ್ರೋ ರೈಲು ಸೇವೆಗಳು ಆರಂಭವಾಗಲಿವೆ.
ಮಂಗಳವಾರದಿಂದ ಶನಿವಾರದವರೆಗೆ, ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ (ಸುದ್ದಗುಂಟೆ ಪಾಳ್ಯ) ಈ ಎರಡೂ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 6ಗಂಟೆಯಿಂದ ರೈಲು ಸೇವೆಗಳು ಆರಂಭವಾಗಲಿವೆ.
ರವಿವಾರದಂದು ಬೆಳಗ್ಗೆ 7ಗಂಟೆಯಿಂದ ರೈಲು ಸೇವೆಗಳು ಆರಂಭವಾಗಲಿವೆ. ಕೊನೆಯ ರೈಲು ಸೇವೆಯು ಕಾಳೇನ ಅಗ್ರಹಾರದಿಂದ ರಾತ್ರಿ 10:50ಕ್ಕೆ ಹಾಗೂ ಎಸ್.ಜಿ.ಪಾಳ್ಯ (ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣದಿಂದ ರಾತ್ರಿ 10:54ಕ್ಕೆ ಹೊರಡಲಿದೆ.
ಪ್ರಯಾಣಿಕರ ದಟ್ಟಣೆಯ ಅವಧಿಯಲ್ಲಿ ಪ್ರತಿ 8 ನಿಮಿಷಗಳಿಗೊಮ್ಮೆ ಇತರೆ ಅವಧಿಯಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.




