BENGALURU | ಸಾಲ ಕೊಡಿಸುವ ನೆಪದಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ಪೀಟರ್ ಕ್ಯಾಡಿ ಮನೆ ಮೇಲೆ ಸಿಐಡಿ ಪೊಲೀಸ್ ದಾಳಿ

ಪೀಟರ್ ಕ್ಯಾಡಿ
ಬೆಂಗಳೂರು, ಫೆ.10: ಸಾಲ ಕೊಡಿಸುವ ನೆಪದಲ್ಲಿ ನೂರಾರು ಉದ್ಯಮಿಗಳಿಗೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮನೆ ಮೇಲೆ ಸಿಐಡಿ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಪುಲಿಕೇಶಿ ನಗರದ ಕೋಲ್ಸ್ ಪಾರ್ಕ್ ಸಮೀಪದ ನಿವಾಸಿ ಪೀಟರ್ ಕ್ಯಾಡಿ ವಂಚನೆ ಎಸಗಿದ ಆರೋಪಿಯಾಗಿದ್ದಾನೆ. ಈತನ ಮನೆ ಮೇಲೆ ಇಂದು ಮುಂಜಾನೆ ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಬ್ಯಾಂಕ್ ಗಿಂತಲೂ ಕಡಿಮೆ ಬಡ್ಡಿದರಲ್ಲಿ ಕೋಟ್ಯಂತರ ರೂ. ಸಾಲ ಕೊಡಿಸುವುದಾಗಿ ಹಲವು ಉದ್ಯಮಿಗಳನ್ನು ನಂಬಿಸಿ ಅವರಿಂದ ಚೆಕ್ ಪಡೆದು ವಂಚಿಸಿದ ಆರೋಪ ಈತನ ಮೇಲಿದೆ.
ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಇಂದು ಮುಂಜಾನೆ ಪೀಟರ್ ಕ್ಯಾಡಿ ನಿವಾಸದ ಮೇಲೆ ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Next Story




