ಗುಲಾಬಿ ಮಾರ್ಗ ಮೆಟ್ರೋಗೆ ಉತ್ತಮ ಪ್ರತಿಕ್ರಿಯೆ: ಮೊದಲ ದಿನವೇ 33 ಸಾವಿರಕ್ಕೂ ಅಧಿಕ ಮಂದಿ ಪ್ರಯಾಣ

ಸಾಂದರ್ಭಿಕ ಚಿತ್ರ
ಬೆಂಗಳೂರು : ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ನಮ್ಮ ಮೆಟ್ರೋದ ಬಹುನಿರೀಕ್ಷಿತ ಗುಲಾಬಿ ಮಾರ್ಗದ ಮೊದಲ ಹಂತದ ವಾಣಿಜ್ಯ ಸಂಚಾರಕ್ಕೆ ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ನ.14ರ ರಾತ್ರಿ 8 ಗಂಟೆಯ ವರೆಗೆ ಗುಲಾಬಿ ಮಾರ್ಗದ ನಿಲ್ದಾಣಗಳಲ್ಲಿ ಒಟ್ಟು 33,409 ಮಂದಿ ಪ್ರಯಾಣಿಸಿದ್ದಾರೆ.
ಈ ಪೈಕಿ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವೊಂದರಿಂದಲೇ 18,714 ಮಂದಿ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
ಬಿಎಂಆರ್ಸಿಎಲ್ ಅಂಕಿಅಂಶಗಳ ಪ್ರಕಾರ, ಕಾಳೇನ ಅಗ್ರಹಾರ ನಿಲ್ದಾಣದಿಂದ 4,944 ಮಂದಿ, ಹುಳಿಮಾವು ನಿಲ್ದಾಣದಿಂದ 3,028, ಬಿಳೇಕಹಳ್ಳಿ-ಐಐಎಂಬಿ ನಿಲ್ದಾಣದಿಂದ 2,316, ಎನ್ಎಸ್ ಪಾಳ್ಯ - ಜೆ.ಪಿ.ನಗರ 4ನೇ ಹಂತದಿಂದ 1,640 ಮಂದಿ ಹಾಗೂ ಸುದ್ದಗುಂಟೆ ಪಾಳ್ಯ ನಿಲ್ದಾಣದಿಂದ 2,767 ಮಂದಿ ಪ್ರಯಾಣಿಸಿದ್ದಾರೆ. ಜಯದೇವ ಆಸ್ಪತ್ರೆ ನಿಲ್ದಾಣದ ಒಟ್ಟು 18,714 ಬೋಡಿರ್ಂಗ್ ಸೇರಿ ಆರು ನಿಲ್ದಾಣಗಳ ಒಟ್ಟು ಸಂಖ್ಯೆ 33,409 ದಾಖಲಾಗಿದೆ.
ಕಾಳೇನ ಅಗ್ರಹಾರದಿಂದ ಎಸ್.ಜಿ.ಪಾಳ್ಯವರೆಗಿನ 7.5 ಕಿಲೋಮೀಟರ್ ಉದ್ದದ ಎತ್ತರಿಸಿದ ಮಾರ್ಗದಲ್ಲಿ ಮೊದಲ ಹಂತದ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ್ದರು.




