ಆಸ್ಟರ್ ಸಿಎಂಐ ಆಸ್ಪತ್ರೆಯಿಂದ ಎಐ ಆಧಾರಿತ ಅತ್ಯಾಧುನಿಕ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಚಾಲನೆ

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೆ ಮುನ್ನುಡಿಯಾದ ಆಸ್ಟರ್ ಸಿಎಂಐ ಆಸ್ಪತ್ರೆಯಿಂದ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅತ್ಯಾಧುನಿಕ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಚಾಲನೆ ನೀಡಲಾಯಿತು.
ಎಐ ಕಾರ್ಪಲ್ ಟನಲ್ ಸಿಂಡ್ರೋಮ್ (ಸಿಟಿಎಸ್) ನರವಿಜ್ಞಾನ ವಿಭಾಗವು ಆಭಿವೃದ್ಧಿ ಪಡಿಸಿರುವ ತಂತ್ರಜ್ಞಾನ ಇದಾಗಿದ್ದು, ಪರಿಣಾಮಕಾರಿ ಸ್ಕ್ಯಾನಿಂಗ್ ಹಾಗೂ ರೋಗಪತ್ತೆಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಆಸ್ಟರ್ ಡಿಎಂ ಹೆಲ್ತ್ ಕೇರ್ ಇದರ ಸಿಇಒ ಡಾ. ನಿತೀಶ್ ಶೆಟ್ಟಿ ತಿಳಿಸಿದರು.
ಆಸ್ಟರ್ ಸಿಎಂಐ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಎಸ್ ಲಕ್ಷ್ಮಣನ್, ಸಿಇಒ ರಮೇಶ್ ಕುಮಾರ್ ಎಸ್, ಡಾ. ಲೋಕೇಶ್ ಬತ್ತಲ, ಪ್ರೊ. ಫಣೀಂದ್ರ ಯಲವರ್ತಿ ಉಪಸ್ಥಿತರಿದ್ದರು.
Next Story





