ವಾಣಿಜ್ಯ ವಿಭಾಗದಲ್ಲಿ ಅನನ್ಯ ರಾಜ್ಯಕ್ಕೆ ಐದನೆ ಶ್ರೇಯಾಂಕ
ಅನನ್ಯ ನಾಗೇಶ್
ಬೆಂಗಳೂರು : ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ನಾಗೇಶ್ ಬಿ. ಅವರ ಪುತ್ರಿ ಕು. ಅನನ್ಯ ನಾಗೇಶ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99ರಷ್ಟು (600/593) ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರುತ್ತಾರೆ.
ಅನನ್ಯ ಅವರು ಯಲಹಂಕದ ನಾಗಾರ್ಜುನ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ 5ನೇ ಶ್ರೇಯಾಂಕ ಪಡೆದಿದ್ದು, ಇವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.
Next Story