ಪೋಕ್ಸೊ ಪ್ರಕರಣ: ಸಿಐಡಿ ಮುಂದೆ ಹಾಜರಾದ ಬಿ.ಎಸ್. ಯಡಿಯೂರಪ್ಪ
ಬೆಂಗಳೂರು: ಪೋಕ್ಸೊ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಮುಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಹಾಜರಾಗಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿದ್ದ ಡಿವೈಎಸ್ಪಿ ಪೃಥ್ವಿ ಬದಲಿಗೆ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಡಿವೈಎಸ್ಪಿ ಪುನೀತ್ ಮುಂದೆ ಬಿಎಸ್ ವೈ ಹಾಜರಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ವಾರ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿತ್ತು. ದೆಹಲಿಯಲ್ಲಿ ಇರುವುದಾಗಿ ಹೇಳಿ ಇಂದು ಹಾಜರಾಗುವುದಾಗಿ ಬಿಎಸ್ ವೈ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಎರಡನೇ ಬಾರಿ ನೊಟೀಸ್ ನೀಡಿತ್ತು. ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಮತ್ತೊಂದೆಡೆ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿ ಬಂಧಿಸದಂತೆ ಹೇಳಿ ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಬಿಎಸ್ ವೈ ವಿಚಾರಣೆಗೆ ಹಾಜರಾಗಿದ್ದಾರೆ.
ಬಿ ಎಸ್ ವೈ ವಿರುದ್ಧ ದಾಖಲಾಗಿದ್ದ ಪೋಕ್ಸೊ ಕೇಸ್ ಹಿನ್ನೆಲೆ...
* ಫೆಬ್ರವರಿ 2 ರಂದು ನ್ಯಾಯ ಕೇಳಿ ಬಿ ಎಸ್ ವೈ ಮನೆಗೆ ಹೋಗಿದ್ದ ಸಂತ್ರಸ್ತೆ ಹಾಗು ತಾಯಿ
* ಮಾರ್ಚ್ 14 ರಂದು ಸದಾಶಿವನಗರ ಠಾಣೆಯಲ್ಲಿ ಬಿ ಎಸ್ ವೈ ವಿರುದ್ಧ ಪೋಕ್ಸೊ ಕೇಸ್ ನಡಿ ಎಫ್ ಐ ಆರ್ ದಾಖಲು
* ಮಾರ್ಚ್ 14 ರಂದು ಎಸಿಎಂಎಂ 25 ನೇ ನ್ಯಾಯಾಧೀಶರ ಮುಂದೆ ಸಂತ್ರಸ್ತೆಯ ಸಿಆರ್ ಪಿಸಿ 164 ಹೇಳಿಕೆ ದಾಖಲು
* ಮಾರ್ಚ್ 14 ರಂದೆ ಪ್ರಕರಣವನ್ನ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.
* ಎಪ್ರಿಲ್ 12 ರಂದು ವಿಚಾರಣೆಗೆ ಹಾಜರಾಗುವಂತೆ ಬಿ ಎಸ್ ವೈ ಗೆ ನೋಟಿಸ್ ನೀಡಿದ್ದ ಸಿಐಡಿ
* ಏಪ್ರಿಲ್ 12 ರಂದು ವಿಚಾರಣೆಗೆ ಹಾಜರಾಗಿ ಧ್ವನಿ ಸ್ಯಾಂಪಲ್ ನೀಡಿದ್ದ ಬಿ ಎಸ್ ವೈ
* ತಾಯಿ ಸಾವಿನ ಬಳಿಕ ಸಂತ್ರಸ್ತೆ ಮತ್ತೊಬ್ಬನಿಂದ ಹೈ ಕೋರ್ಟ್ ಗೆ ರಿಟ್ ಅರ್ಜಿ
* ಹೈ ಕೋರ್ಟ್ ಗೆ ಅರ್ಜಿ ಬೆನ್ನಲ್ಲೇ ಜೂನ್ 12 ರಂದು ಬಿ ಎಸ್ ವೈ ಗೆ ನೋಟಿಸ್
* ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜೂನ್ 12 ರಂದು ಅರೆಸ್ಟ್ ವಾರೆಂಟ್ ಕೋರಿ ಸಿಐಡಿಯಿಂದ ಅರ್ಜಿ