ವಕ್ಫ್ ಬೋರ್ಡ್ ಮತದಾರರಾಗಿ ನೋಂದಾಯಿಸಲು ಅಧಿಸೂಚನೆ
ಬೆಂಗಳೂರು : ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ತು, ರಾಜ್ಯ ಬಾರ್ ಕೌನ್ಸಿಲ್ನ ಮುಸ್ಲಿಮ್ ಸದಸ್ಯರು, ಒಂದು ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚು ವಾರ್ಷಿಕ ಆದಾಯವುಳ್ಳ ವಕ್ಫ್ ಸಂಸ್ಥೆಯ ಮುತವಲ್ಲಿಗಳು, ಮಾಜಿ ಸಂಸತ್ ಸದಸ್ಯರು, ಮಾಜಿ ಶಾಸಕರು, ಬಾರ್ ಕೌನ್ಸಿಲ್ನ ಮಾಜಿ ಸದಸ್ಯರ ಮತಕ್ಷೇತ್ರಗಳಿಗೆ ಅರ್ಹ ವ್ಯಕ್ತಿಗಳು ತಮ್ಮನ್ನು ಮತದಾರರಾಗಿ ನೋಂದಾಯಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಲು ಜು.3 ಕೊನೆಯ ದಿನವಾಗಿದೆ. ಕರಡು ಮತದಾರರ ಪಟ್ಟಿಯನ್ನು ಆ.3 ರಂದು ಪ್ರಕಟಿಸಲಾಗುವುದು. ಹಕ್ಕು ಅಥವಾ ಆಕ್ಷೇಪಣೆಗಳನ್ನು ಆ.3 ರಿಂದ 17ರವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಸೆ.6ರಂದು ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-2211 0108ಗೆ ಸಂಪರ್ಕಿಸಬಹುದು ಎಂದು ರಾಜ್ಯ ವಕ್ಫ್ ಮಂಡಳಿ ಚುನಾವಣೆಯ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story