ಬೆಂಗಳೂರು| ಕಲ್ಯಾಣನಗರದಲ್ಲಿ “ಬ್ಯಾಂಬೂ ಬಿಸ್ಟ್ರೊ” ಶುಭಾರಂಭ

ಬೆಂಗಳೂರು: ಬ್ಯಾಂಬೂ ರೆಸ್ಟೋರೆಂಟ್ ಸಮೂಹದ ಇಟಾಲಿಯನ್, ಮೆಕ್ಸಿಕನ್ ಖಾದ್ಯವನ್ನೊಳಗೊಂಡ ಹೊಸ ಹೋಟೆಲ್ ʼಬ್ಯಾಂಬೂ ಬಿಸ್ಟ್ರೊʼ ಬೆಂಗಳೂರಿನ ಕಲ್ಯಾಣನಗರದ CMR ರಸ್ತೆಯಲ್ಲಿ ಶುಕ್ರವಾರ ಶುಭಾರಂಭಗೊಂಡಿತು.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಈ ಹೊಸ ಹೋಟೆಲಿನ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ನಾಗರಾಜ್ ಯಾದವ್, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಮುಝಫ್ಫರ್ ಅಹ್ಮದ್, HAL ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಹನುಮಂತ ರೆಡ್ಡಿ, ಮಹದೇವಪುರ ವಿಭಾಗದ ಆಹಾರ ಸುರಕ್ಷತಾ ಅಧಿಕಾರಿ ಜಿ. ಹನುಮಂತಪ್ಪ, ಫಲಾಹ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ N. ಅರಬಿ ಕುಂಞಿ, ಕರ್ನಾಟಕ ರಕ್ಷಣಾ ವೇದಿಕೆಯ ಪರಮೇಶ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಸಾಮನಿಗೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಬ್ಯಾಂಬೂ ಸಂಸ್ಥೆಯ ಇನ್ನೊಂದು ವಿಭಾಗವಾದ “ಚಾಯ್ ಪೀಡಿಯಾ”ದ 3ನೇ ಶಾಖೆಯು ಶುಭಾರಂಭಗೊಂಡಿತು.
ಅತ್ಯಕರ್ಷಕ ವಿನೂತನ ಒಳಾಂಗಣ ವಿನ್ಯಾಸ ಹೊಂದಿದ ಈ ನೂತನ ಹೋಟೆಲಿನಲ್ಲಿ ರಚಿಕರವಾದ ಕಾಂಟಿನೆಂಟಲ್, ಇಟಾಲಿಯನ್ ಹಾಗೂ ಮೆಕ್ಸಿಕನ್ ಖಾದ್ಯಗಳು ಲಭ್ಯವಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಮಹಮ್ಮದ್ ಆಶಿಕ್, ಮುದಸ್ಸಿರ್ ಅಹ್ಮದ್, ನಾಸಿರ್ ಉಚ್ಚಿಲ್, ಕಲಂದರ್ ಯು.ಕೆ, ಹಾಗೂ ಕಾರ್ತಿಕ್ ನಾಯರ್ ಅತಿಥಿಗಳನ್ನು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.







