ಬೆಂಗಳೂರು: ಕ್ರಿಯೇಟಿವ್ ಆರ್ಟ್ ಝೋನ್ ನಿಂದ ಮಕ್ಕಳ ಚಿತ್ರಕಲಾ ಪ್ರದರ್ಶನ

ಬೆಂಗಳೂರು: ಗಿರಿನಗರದ ಕ್ರಿಯೇಟಿವ್ ಆರ್ಟ್ ಝೋನ್ ಸಂಸ್ಥೆಯು ಏರ್ಪಡಿಸಿದ್ದ 11ನೇ ವರ್ಷದ ಮಕ್ಕಳ ಚಿತ್ರಕಲಾ ಪ್ರದರ್ಶನದಲ್ಲಿ ಸಂಸ್ಥೆಯಲ್ಲಿ ಕಲಿಯುತ್ತಿರುವ ನೂರಾರು ವಿದ್ಯಾರ್ಥಿಗಳು ಬಿಡಿಸಿರುವ ಚಿತ್ರಗಳು ಪ್ರದರ್ಶನಗೊಂಡವು.
ಪ್ರಾಣಿ, ಪಕ್ಷಿ, ಗಿಡ, ಮರಗಳ ಸಹಿತ ಮಕ್ಕಳು ಬಿಡಿಸಿರುವವಿಭಿನ್ನ ಚಿತ್ರಗಳು ಕಣ್ಮನ ಸೆಳೆದವು. ಮಕ್ಕಳಲ್ಲಿರುವ ಕಲೆಗೆ ವೇದಿಕೆ ಒದಗಿಸಿ, ಅವರ ಕಲಾ ಪ್ರದರ್ಶನ ಇಲ್ಲಿ ನಡೆಯಿತು.
ನಾಲ್ಕು ವರ್ಷದಿಂದ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಚಿತ್ರಕಲಾ ಪ್ರಾಧ್ಯಾಪಕರು ಆಗಿರುವ ನಾಗೇಂದ್ರ ಮತ್ತು ಅವರ ಪತ್ನಿ ಅರ್ಚನಾರ ಗರಡಿಯಲ್ಲಿ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ.
Next Story







