ಉರ್ದು ಅಕಾಡಮಿ ಪ್ರಶಸ್ತಿ ವಾಪಸ್ ಮಾಡಿದ ಪ್ರೊ.ಮಾಹೆರ್ ಮನ್ಸೂರ್

ಬೆಂಗಳೂರು : ರಾಜ್ಯ ಉರ್ದು ಅಕಾಡಮಿ ವತಿಯಿಂದ ಇತ್ತೀಚೆಗೆ ತಮಗೆ ಪ್ರದಾನ ಮಾಡಲಾದ ವಿಶೇಷ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಅನುವಾದಕ, ಕೇಂದ್ರ ಸಾಹಿತ್ಯ ಪ್ರಸಸ್ತಿ ಪುರಸ್ಕೃತ ಪ್ರೊ.ಮಾಹೆರ್ ಮನ್ಸೂರ್ ಹಿಂದಿರುಗಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉರ್ದು ಅಕಾಡಮಿಯು ಅರ್ಹ ಸಾಧಕರನ್ನು ಗುರುತಿಸುವಲ್ಲಿ ವಿಫಲವಾಗಿದೆ. ಮನಸೋಇಚ್ಛೆ ಪ್ರಶಸ್ತಿಗಳನ್ನು ಹಂಚಿಕೆ ಮಾಡಲಾಗಿದೆ. ಆ ಮೂಲಕ ಪ್ರಶಸ್ತಿಗಳ ಮೌಲ್ಯ ಕುಸಿಯುವಂತೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಉರ್ದು ಭಾಷೆ, ಸಾಹಿತ್ಯಕ್ಕೆ ನಮ್ಮ ಕೊಡುಗೆಯನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಗೌರವ ನೀಡಬೇಕಿತ್ತು. ನಮಗೆ ಪ್ರಶಸ್ತಿ ನೀಡದೆ ಇದ್ದಿದ್ದರೂ ಬೇಸರ ಆಗುತ್ತಿರಲಿಲ್ಲ. ಆದರೆ, ಯಾವ ವಿಭಾಗದಲ್ಲೂ ಪರಿಗಣನೆಗೆ ತೆಗೆದುಕೊಳ್ಳದೆ ವಿಶೇಷ ಪ್ರಶಸ್ತಿ ಎಂದು ನೀಡಿದ್ದು ಬೇಸರ ತರಿಸಿದೆ. ಆದುದರಿಂದ, ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಅವರು ಹೇಳಿದರು.
Next Story





