ಬೆಂಗಳೂರಿನ ಎಸ್ಡಿಪಿಐ ಕಚೇರಿ ಮೇಲೆ ಈಡಿ ದಾಳಿ

Photo: Facebook/ED
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದ ತನಿಖೆಯ ಭಾಗವಾಗಿ ಏಕಕಾಲದಲ್ಲಿ ದೇಶಾದ್ಯಂತ ಎಸ್ಡಿಪಿಐ ಪಕ್ಷದ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಈಡಿ ಅಧಿಕಾರಿಗಳು) ದಾಳಿ ನಡೆಸಿದ್ದು, ಬೆಂಗಳೂರಿನ ಕಬ್ಬನ್ಪೇಟೆಯಲ್ಲಿರುವ ಕಚೇರಿಯಲ್ಲೂ ಶೋಧ ಕಾರ್ಯ ಕೈಗೊಂಡರು.
ಗುರುವಾರ ನಗರದ ಕಬ್ಬನ್ ಪೇಟೆಯಲ್ಲಿರುವ ಎಸ್ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿ, ಕಚೇರಿ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡರು. ಈ ವೇಲೆ, ಲೆಕ್ಕಪತ್ರಗಳ ಮಾಹಿತಿ ಪ್ರತಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ದಾಳಿ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರನನ್ನು ಬಂಧಿಸಿದ ನಂತರ ಈ ದಾಳಿಗಳು ನಡೆದಿವೆ.
ಅದೇ ರೀತಿ, ಕೇರಳದ ತಿರುವನಂತಪುರಂ ಮತ್ತು ಮಲಪ್ಪುರಂ, ಆಂಧ್ರಪ್ರದೇಶದ ನಂದ್ಯಾಲ್, ಜಾರ್ಖಂಡ್ನ ಪಕುರ್, ಮಹಾರಾಷ್ಟ್ರದ ಥಾಣೆ, ಚೆನ್ನೈ, ಕೋಲ್ಕತಾ, ಲಕ್ನೋ ಮತ್ತು ಜೈಪುರ ಸೇರಿದಂತೆ ದಿಲ್ಲಿಯ ಎರಡು ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.





