Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಜಾಣಗೆರೆ ಪತ್ರಕರ್ತರಾಗಿದ್ದುಕೊಂಡೇ...

ಜಾಣಗೆರೆ ಪತ್ರಕರ್ತರಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲಿ ನೆಲೆಯೂರಿದವರು: ಪ್ರೊ.ಬರಗೂರು

ವಾರ್ತಾಭಾರತಿವಾರ್ತಾಭಾರತಿ15 March 2025 10:38 PM IST
share
ಜಾಣಗೆರೆ ಪತ್ರಕರ್ತರಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲಿ ನೆಲೆಯೂರಿದವರು: ಪ್ರೊ.ಬರಗೂರು

ಬೆಂಗಳೂರು : ಪತ್ರಕರ್ತರಿಗೆ, ಹೋರಾಟಗಾರರಿಗೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದು ಕಷ್ಟದ ಸಂಗತಿ. ಆದರೆ, ಜಾಣಗೆರೆ ವೆಂಕಟರಾಮಯ್ಯ ಪತ್ರಕರ್ತ ಮತ್ತು ಹೋರಾಟಗಾರನಾಗಿದ್ದುಕೊಂಡೇ ಬರವಣಿಗೆಯಲ್ಲಿ ತೊಡಗಿಸಿಕೊಂಡು ಎಲ್ಲ ಒತ್ತಡಗಳನ್ನು ಮೀರಿ ಸಾಹಿತ್ಯ ಕ್ಷೇತ್ರದಲ್ಲಿ ನೆಲೆಯೂರಿದವರು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಇಂದಿಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ‘ಜಾಣಗೆರೆ ಪತ್ರಿಕೆ ಪ್ರಕಾಶನ’ದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ರಚಿಸಿರುವ ‘ನುಡಿಗೋಲು-2 ಅಪೂರ್ವ ಸಾಧಕರ ನುಡಿ ಸಂಕಥನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಕಡಿಮೆ ಬರೆಯುತ್ತಾರೆ ಎನ್ನುವುದು ಹಲವರಲ್ಲಿನ ಭಾವನೆ. ಪತ್ರಿಕಾ ರಂಗದಲ್ಲಿರುವವರಿಗೆ ಒತ್ತಡದ ಕಾರಣ ಬರವಣಿಗೆ ಕಡಿಮೆ ಎನ್ನುತ್ತಾರೆ. ಅದೇ ರೀತಿಯಲ್ಲಿ ಹೋರಾಟಗಾರರಿಗೂ ಹಲವು ಸಮಸ್ಯೆಗಳಿರುತ್ತವೆ. ಆದರೆ, ಜಾಣಗೆರೆ ವೆಂಕಟರಾಮಯ್ಯ ಶ್ರಮದಿಂದ ಸಾಹಿತ್ಯಕಾರರಾದವರು ಎಂದು ನುಡಿದರು.

ವ್ಯಕ್ತಿ ಚಿತ್ರ ಬರೆಯುವಾಗ ಇಬ್ಬರು ವ್ಯಕ್ತಿಗಳಿರುತ್ತಾರೆ. ಬರೆಯುವರು, ಮತ್ತೊಂದು ಬರೆಸಿಕೊಳ್ಳುವರು. ಯಾವುದೇ ವ್ಯಕ್ತಿ ಚಿತ್ರಗಳನ್ನು ಯಾರೇ ಬರೆದರೂ ಪರಿಪೂರ್ಣ ಎಂದು ಹೇಳುವುದಕ್ಕೆ ಆಗುವುದಿಲ್ಲ. ಜಾಣಗೆರೆ ಬರೆದಿರುವ ವ್ಯಕ್ತಿತ್ವಗಳು ಸಕಾರಾತ್ಮಕ ಗುಣಗಳನ್ನು ಮತ್ತು ಸಾಧನೆಗಳನ್ನು ಗುರುತಿಸಿ ಬರೆದಿದ್ದಾರೆ. ನೇರ ಪರಿಚಯದಿಂದ ಬರೆಯುವಂತದ್ದು, ಪರಿಚಯವಿಲ್ಲದೇ ಅಧ್ಯಯನದಿಂದ ಬರೆಯುವಂತದ್ದು. ಒಡನಾಟದಿಂದ ಬರೆಯುವ ವ್ಯಕ್ತಿ ಚಿತ್ರದಲ್ಲಿ ಅನುಭವದ ಸಂವೇದನೆ ಇರುತ್ತದೆ. ಒಡನಾಟ ಇಲ್ಲದೇ ಅಧ್ಯಯನದಿಂದ ಹುಟ್ಟುವ ವ್ಯಕ್ತಿ ಚಿತ್ರದಲ್ಲಿ ಅರಿವಿನ ಸಹಯೋಜನೆ ಇರುತ್ತದೆ ಎಂದು ಬರಗೂರು ತಿಳಿಸಿದರು.

ಜಾಣಗೆರೆ ಬರೆದಿರುವ ವ್ಯಕ್ತಿಚಿತ್ರಗಳು ಅನುಭವ ಇರುವಂತ ಚಿತ್ರಗಳೆ ಆಗಿವೆ. ಯಾವುದೇ ವ್ಯಕ್ತಿ ಚಿತ್ರಗಳು ಅವರ ಅನುಭವ, ಅರಿವು, ಅನುಸಂಧಾನ ಮತ್ತು ದೃಷ್ಟಿಕೋನದಿಂದ ಹುಟ್ಟಿಕೊಳ್ಳುತ್ತದೆ. ಕೃತಿಯಲ್ಲಿ ಎಲ್ಲ ವ್ಯಕ್ತಿ ಚಿತ್ರಣಗಳು ಅವರ ಅಂತರಂಗ, ಬಹಿರಂಗಗಳನ್ನು ಹಿಡಿದಿಟ್ಟುಕೊಂಡು ಹೋಗುವುದರ ಜೊತೆಗೆ, ಸಕಾರಾತ್ಮ ಗುಣಲಕ್ಷಣಗಳಿಂದ ಪ್ರಾಮಾಣಿಕವಾದ, ಕಂಡದ್ದನ್ನು ಕಂಡಹಾಗಿರುವ ಚಿತ್ರಣಗಳನ್ನು ನೋಡಬಹುದು. ಅಷ್ಟೇ ಅಲ್ಲದೇ ಅಪ್ರಸಿದ್ಧ ವ್ಯಕ್ತಿ ಚಿತ್ರಣಗಳನ್ನು ಕಟ್ಟುಕೊಟ್ಟಿದ್ದಾರೆ. ಸಾಮಾಜಿಕ ಇತಿಹಾಸದಲ್ಲಿ ಎಷ್ಟೋ ಜನ ಪ್ರಸಿದ್ಧರಾಗದೇ ಕ್ರಿಯಾಶಿಲಾರಾಗಿದ್ದವರನ್ನು ಮರೆತು ಹೋಗುತ್ತಾರೆ ಎಂದರು.

ಕೃತಿಯ ವಿಶಿಷ್ಟತೆ ಎಂದರೆ ಜಾತಿ, ಧರ್ಮಗಳನ್ನು ಮೀರಿದ ವ್ಯಕ್ತಿತ್ವಗಳನ್ನು ಚಿತ್ರಿಕರಿಸಿದ್ದಾಗಿದೆ. ಇದೆಲ್ಲವನ್ನೂ ನೋಡಿದಾಗ ಜಾಣಗೆರೆಯವರ ಜಾತ್ಯಾತೀತ ಮನೋಭಾವ ಎದ್ದು ಕಾಣುತ್ತದೆ. ಕರ್ನಾಟಕ ಸಮಾಜ ಜಾತಿ, ಧರ್ಮ, ದ್ವೇಷಗಳನ್ನು ಮೀರಿ ಬೆಳೆದಿದ್ದು. ಕೃತಿಯಲ್ಲಿ ಅನೇಕ ಹೋರಾಟಗಾರರ ಚಿತ್ರಣವಿದೆ. ವ್ಯಕ್ತಿಗಳ ಪರಿಚಯದ ಜೊತೆಗೆ ಕರ್ನಾಟಕದ ವಿವಿಧ ಹೋರಾಟಗಳ ಇತಿಹಾಸದ ಕೆಲವು ಪುಟಗಳನ್ನು ಕಾಣಬಹುದು. ರೈತ ಚಳವಳಿ ಮತ್ತು ಕನ್ನಡ ಚಳವಳಿಯ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. ಬರವಣಿಗೆಯಲ್ಲಿ ಎಲ್ಲೂ ಉದ್ರೇಕ ಇಲ್ಲ ಎಂದು ಬರಗೂರು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಂಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಸಂಸ್ಕೃತಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್, ಡಾ.ಅಗ್ರಹಾರ ಕೃಷ್ಣಮೂರ್ತಿ, ಪತ್ರಕರ್ತ ಜಾಗಣಗೆರೆ ವೆಂಕಟರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.


share
ವಾರ್ತಾಭಾರತಿ
ವಾರ್ತಾಭಾರತಿ
Next Story
X