ದೇಶದಲ್ಲಿ ಶಾಂತಿ, ಸಾಮರಸ್ಯ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥಿಸಿ: ಸಲೀಂ ಅಹ್ಮದ್

ಬೆಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಇಂದು ಬೆಂಗಳೂರಿನ ಹೆಗ್ಡೆ ನಗರದ ಹಜ್ ಭವನದಲ್ಲಿ ಪವಿತ್ರ ಹಜ್ ಯಾತ್ರೆ ಹೊರಟಿರುವ 440 ಯಾತ್ರಿಗಳನ್ನು ಬೀಳ್ಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ರವರು, ದೇಶದಲ್ಲಿ ಶಾಂತಿ, ಸಾಮರಸ್ಯ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥಿಸಿ ಎಂದು ಹೇಳಿ ಶುಭ ಹಾರೈಸಿದರು.
ಜೀವನದಲ್ಲಿ ಒಮ್ಮೆಯಾದರೂ ಅವಕಾಶ ಸಿಗುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿರುವ ಹಜ್ ಯಾತ್ರಿಗಳು ದೇಶದ ಗಡಿ ಕಾಯುತ್ತಿರುವ ಹೆಮ್ಮೆಯ ಸೈನಿಕರಿಗೆ ಕೂಡ ಪ್ರಾರ್ಥಿಸಲು ಈ ಸಂದರ್ಭದಲ್ಲಿ ಸಲೀಂ ಅಹ್ಮದ್ ರವರು ಮನವಿ ಮಾಡಿದರು.
ರಾಜ್ಯ ಹಜ್ ಕಮಿಟಿ ಚಯರ್ಮಾನ್ ಝುಲ್ಫಿಕರ್ ಅಹ್ಮದ್ ಟಿಪ್ಪು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್ ಅಹ್ಮದ್, ವಿಶೇಷಾಧಿಕಾರಿ ಸರ್ಫರಾಝ್ ಅಹ್ಮದ್, ಆಂಧ್ರ ಹಜ್ ಸಮಿತಿ ಚಯರ್ಮಾನ್ ಹಸನ್ ಪಾಶಾ, ರಾಜ್ಯ ಸದಸ್ಯರಾದ ಸಯ್ಯದ್ ಶಾಹಿದ್, ಮುಖಂಡರಾದ ರಹ್ಮಾನ್ ಶರೀಫ್ ಮತ್ತಿತರರು ಭಾಗವಹಿಸಿದ್ದರು.
Next Story







