ಲಂಚ ಆರೋಪ: ಇಬ್ಬರು ಲೋಕಾಯುಕ್ತ ಬಲೆಗೆ

ಬೆಂಗಳೂರು : ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸೂಪರಿಂಟೆಂಟ್ ಮತ್ತು ಕಂಪ್ಯೂಟರ್ ಆಪರೇಟರ್ ಲಂಚ ಸ್ವೀಕರಿಸುವಾಗಲೇ ಸಿಕ್ಕಿ ಬಿದ್ದಿದ್ದಾರೆ.
ಸೂಪರಿಟೆಂಡೆಟ್ ಅಬ್ದುಲ್ ವಲಿ, ಕಂಪ್ಯೂಟರ್ ಆಪರೇಟರ್ ಸೌಮ್ಯಾ ಬಡಗೇರ ವರ್ಗಾವಣೆಗೆ ಅಂಗನವಾಡಿ ಸಹಾಯಕಿಯಿಂದ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ಬಂದಿದ್ದ ದೂರಿನ್ವಯ ದಾಳಿ ನಡೆಸಲಾಗಿದ್ದು, ಮುಂಗಡವಾಗಿ 15 ಸಾವಿರ ಲಂಚದ ಹಣ ಸ್ವೀಕರಿಸುವಾಗಲೇ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ, ಕಂಪ್ಯೂಟರ್ ಆಪರೇಟರ್ ಸೌಮ್ಯಾ ಅಸ್ವಸ್ಥರಾದ ಘಟನೆ ಕೂಡ ನಡೆಯಿತು. ತಕ್ಷಣವೇ ಕಚೇರಿಗೆ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಕರಣ ಸಂಬಂಧ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.
Next Story





