ಇಂದು ಬಾನು ಮುಷ್ತಾಕ್ರ ‘ಒಮ್ಮೆ ಹೆಣ್ಣಾಗು ಪ್ರಭುವೇ’ ಕಥೆಯ ಬಾನುಲಿ ನಾಟಕ ಪ್ರಸಾರ

ಬಾನು ಮುಷ್ತಾಕ್
ಬೆಂಗಳೂರು : ಬೂಕರ್ ಅಂತರ್ ರಾಷ್ಟ್ರೀಯ ಪ್ರಶಸ್ತಿ ಪಡೆದ ಹಿರಿಯ ಲೇಖಕಿ ಬಾನು ಮುಷ್ತಾಕ್ ಅವರ ಕಥಾ ಸಂಕಲನ (ಹಾರ್ಟ್ ಲ್ಯಾಂಪ್)ದಲ್ಲಿರುವ ಕಥೆ (ಬಿ ಎ ವೂಮನ್ ಒನ್ಸ್ , ಓ ಲಾರ್ಡ್)ನ ಬಾನುಲಿ ನಾಟಕದ ರೂಪಾಂತರ ‘ಒಮ್ಮೆ ಹೆಣ್ಣಾಗು ಪ್ರಭುವೇ’ ಮೇ 26 ರಂದು ರಾತ್ರಿ 9:30ಕ್ಕೆ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಈ ನಾಟಕ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
28 ವರ್ಷಗಳ ಹಿಂದೆ ಬೆಂಗಳೂರು ಆಕಾಶವಾಣಿಯ ವಾಣಿಜ್ಯ ಪ್ರಸಾರ ಕೇಂದ್ರವು ಈ ನಾಟಕವನ್ನು ಜಾಗತಿಕ ಬಾನುಲಿ ನಾಟಕಗಳ ಪ್ರಸಾರ ಸ್ಪರ್ಧೆಗೆ ಕಳುಹಿಸಿದಾಗ ಈ ನಾಟಕ ಅಂತರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿತ್ತು.
ಬಾನು ಮುಷ್ತಾಕ್ ಅವರ ಒಮ್ಮೆ ಹೆಣ್ಣಾಗು ಪ್ರಭುವೇ ಕಥೆಯನ್ನು ಬಾನುಲಿ ನಾಟಕಕ್ಕೆ ರೂಪಾಂತರಿಸಿದವರು ಜಿ.ಎಂ.ಶಿರಹಟ್ಟಿ, ಈ ನಾಟಕವನ್ನು ಪ್ರಸ್ತುತಪಡಿಸಿದವರು ಮೈತ್ರೇಯಿ ಜಹಗಿರದಾರ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
Next Story





